ಶಿಕ್ಷಣದೊಂದಿಗೆ ಕೌಶಲವೂ ಮುಖ್ಯ

24 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ರ್ಯಾಪಿಡ್​ ಸಂಸ್ಥೆ ಹಾಗೂ ಯಶೋಧಾ ವೆಲ್ಫೇರ್​ ಟ್ರಸ್ಟ್​ ವತಿಯಿಂದ ರ್ಯಾಪಿಡ್​ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಮಣ್ಣಿನ ಮಾದರಿ ತಯಾರಿಕೆ ಕಾರ್ಯಾಗಾರ ಸಮಾರೋಪ ಸಮಾರಂಭ ಬುಧವಾರ ಜರುಗಿತು.
ಅತಿಥಿಯಾಗಿ ಪಾಲ್ಗೊಂಡಿದ್ದ ಯಶೋಧಾ ವೆಲ್ಫೇರ್​ ಟ್ರಸ್ಟ್​ ಮ್ಯಾನೇಜಿಂಗ್​ ಟ್ರಸ್ಟೀ ದತ್ತಾತ್ರೇಯ ಅಗ್ನಿಹೋತ್ರಿ ಮಾತನಾಡಿ, ಪ್ರಕೃತಿಗೆ ಮಾರಕವಾದ ಆಕರ್ಷಕ ಉತ್ಪನ್ನಗಳ ಬಳಕೆಯಿಂದ ಸ್ವಂತಿಕೆ, ಹಣ, ಬದುಕು ವ್ಯರ್ಥ. ಪ್ರಕೃತಿಯೊಂದಿಗೆ ನಾವೆಲ್ಲರೂ ಜೀವಿಸಬೇಕಿದ್ದು, ಪ್ರಾಚಿನ ಕುಶಲ ಕಲೆಗಳನ್ನು ಉಳಿಸಲು ಸಹಕಾರ ನೀಡಬೇಕು. ಇಂದಿನ ದಿನಗಳಲ್ಲಿ ಶಿಕ್ಷಣದ ಜತೆಗೆ ಕೌಶಲವೂ ಮುಖ್ಯ. ಹೀಗಾಗಿ ಎಲ್ಲ ಹೊಸ ಹೊಸ ಕೌಶಲಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ರಾಪಿಡ್​ ಸಂಸ್ಥೆ ಸಿಇಒ ವಾಣಿ ಪುರೋಹಿತ ಮಾತನಾಡಿ, ಶಿಬಿರದ ಕಲಿಕೆಯನ್ನು ಸದ್ಬಳಕೆ ಮಾಡಿಕೊಳ್ಳಿ. ಇಲ್ಲಿ ಕಲಿತ ಕೌಶಲದಿಂದ ಸುಂದರ ಜೀವನ ರೂಪಿಸಿಕೊಂಡು ಆಥಿರ್ಕವಾಗಿ ಸಬಲರಾಗಬೇಕಲ್ಲದೆ, ಆ ಕಲೆಯನ್ನು ಇತರರಿಗೂ ಕಲಿಸಿ ಅವರನ್ನೂ ಸದೃಢರನ್ನಾಗಿ ಮಾಡಬೇಕು ಎಂದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರಜನಿ ರಜಪೂತ ಮಾತನಾಡಿದರು. ಯಶೋದಾ ವೆಲ್ಫೇರ್​ ಟ್ರಸ್ಟ್​ ವ್ಯವಸ್ಥಾಪಕ ಆನಂದ ಅಗ್ನಿಹೋತ್ರಿ, ಯೋಜನಾ ವ್ಯವಸ್ಥಾಪಕ ವಿಜಯಕುಮಾರ ಸತ್ತೂರ, ಸಂಸ್ಥೆ ಸಿಬ್ಬಂದಿ, ಇತರರು ಇದ್ದರು. ನಗರ ಹಾಗೂ ಗ್ರಾಮೀಣ ಭಾಗದ ನೂರಾರು ಶಿಬಿರಾಥಿರ್ಗಳು ಪಾಲ್ಗೊಂಡಿದ್ದರು. ಸ್ನೇಹಾ ದೇಶಪಾಂಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net