

ಕಲಬುರಗಿ: ಮಹಾನಗರ ಪಾಲಿಕೆ ವಾರ್ಡ್ 36 ರ ವಿಜೇತ ಪಕ್ಷೇತರ ಅಭ್ಯರ್ಥಿ ಶಂಭುಲಿಂಗ ಬಳಬಟ್ಟಿ ಆಯ್ಕೆ ಅಸಿಂದು ಎಂದು ಕಲಬುರಗಿ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ.
ಸುಳ್ಳು ಅಪಿಡವಿಟ್ ಸಲ್ಲಿಸಿದ್ದರಿಂದ ಆಯ್ಕೆ ಅಸಿಂಧು ಎಂದು ಆದೇಶ ನೀಡಿದೆ. ನಾಮಪತ್ರ ಸಲ್ಲಿಸುವಾಗ ಆಸ್ತಿ, ವಿದ್ಯಾರ್ಹತೆ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂಬ ಆರೋಪ. ಇದನ್ನು ಪ್ರಶ್ನಿಸಿ ಬಿಜೆಪಿಯ ಅಭ್ಯರ್ಥಿ ಸೂರಜ್ ತಿವಾರಿ ಪರ ವಕೀಲೆ ಆರತಿ ತಿವಾರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಶಂಬುಲಿಂಗ ಬಳಬಟ್ಟಿ. ನಂತರದ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಆಗಿದ್ದರು. ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ದಿಸಿದ್ದ ಬಳಬಟ್ಟಿ ಆಯ್ಕೆಯನ್ನು ಕೋರ್ಟ್ ಅಸಿಂಧುಗೊಳಿಸಿದ್ದು, ಪಾಲಿಕೆ ಹಾವು ಏಣಿ ಆಟದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಂತಾಗಿದೆ.
ಇದರಿಂದ ಬಿಜೆಪಿಯ ಬಲ ಕಡಿಮೆಯಾಗಿದ್ದು, ಸದ್ಯದ ಪ್ರಕಾರ ಕಾಂಗ್ರೆಸ್ 27, ಬಿಜೆಪಿ 22, ಜೆಡಿಎಸ್ 4, ಪಕ್ಷೇತರ 1 ಇದೆ. ಶಂಭುಲಿಂಗ ಅಸಿಂಧುವಾಗಿದ್ದು, ಮುಂದೇನು ಎಂಬ ಪ್ರಶ್ನೆಗೆ ಶೀಘ್ರವೇ ಉತ್ತರ ದೊರೆಯಲಿದೆ.