ಶಂಕರಾಚಾರ್ಯರ ಜಯಂತಿ ಉತ್ಸವ ಸಂಪನ್ನ

bkt-4-2a
ಬಾಗಲಕೋಟೆ ನಗರದ ಶಂಕರಮಠದಲ್ಲಿ ಹಮ್ಮಿಕೊಂಡಿದ್ದ ಶಂಕರ ಜಯಂತಿ ಉತ್ಸವ ಕಾರ್ಯಕ್ರಮವು ಭಾನುವಾರ ಪಾಲಕಿ ಸೇವೆಯೊಂದಿಗೆ ಸಂಪನ್ನಗೊ0ಡಿತು.
Published on

ಬಾಗಲಕೋಟೆ: ಜಗದ್ಗುರು ಆದಿ ಶಂಕಚಾರ್ಯರ ಜಯಂತಿ ಅಂಗವಾಗಿ ಇಲ್ಲಿನ ವಿನಾಯಕ ನಗರದಲ್ಲಿರುವ ನೂತನ ಶೃಂಗೇರಿ ಶಂಕರಮಠದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಉತ್ಸವಕ್ಕೆ ಭಾನುವಾರ ಸಂಭ್ರಮ, ಸಡಗರದಿಂದ ತೆರೆಬಿದ್ದಿತು. ಪಾಲಕಿ ಸೇವೆಯೊಂದಿಗೆ ಉತ್ಸವ ಸಂಪನ್ನಗೊ0ಡಿತು.

ನಿತ್ಯವು ಶ್ರೀಮಠದಲ್ಲಿರುವ ಶ್ರೀ ಚಂದ್ರಮೌಳೇಶ್ವರ ಹಾಗೂ ಶಂಕರಾಚಾರ್ಯರ ಮೂರ್ತಿಗಳಿಗೆ ರುದ್ರಾಭಿಷೇಕ, ನೈವೇದ್ಯ, ಆರತಿ, ವಿಶೇಷ ಪೂಜೆ ಜರುಗಿದವು. ಶಂಕರಾಚಾರ್ಯರ ಅಷ್ಟೋತ್ತರ ಶತನಾಮಾವಳಿ ಪಾರಾಯಣ ನಡೆಸಿ ದೇಶದ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು.ಶ್ರೀ ಶಂಕರಾಚಾರ್ಯ ಭಾವಚಿತ್ರದ ಮೆರವಣಿಗೆ ಭವ್ಯವಾಗಿ ಜರುಗಿತು. ತೊಟ್ಟಿಲೋತ್ಸವ ಉತ್ಸವದ ಕಳೆಗಟ್ಟುವಂತೆ ಮಾಡಿತು. ವೇದ, ಘೋಷಗಳು ನಿತ್ಯವ ಮೊಳಗಿದವು. ಸಿದ್ದಾಪುರದ ಪಂ. ಶ್ರೀ ಸುಪ್ರತೀಕ ಭಟ್ಟ ಉಪನ್ಯಾಸ ನೀಡಿದರು. ಮೂರು ದಿನವು ಮಹಾ ಮಂಗಳಾರತಿ, ನಂತರ ತೀರ್ಥ ಪ್ರಸಾದ ವಿತರಣೆ ನಡೆಯಿತು. ಮಹಾಲಕ್ಷಿ÷್ಮÃ ಕುಲಕರ್ಣಿ, ಅನಘಾ ಕುರುವಿನಕೊಪ್ಪ ಅವರ ಸಂಗೀತ ಕಾರ್ಯಕ್ರಮ ನೆರೆದವರನ್ನು ಭಕ್ತಿಯಲ್ಲಿ ತೇಲುವಂತೆ ಮಾಡಿತು.

ಭಾನುವಾರ ಸಾಮೂಹಿಕ ಸತ್ಯ ನಾರಾಯಣ ಪೂಜೆ, ಕುಂಕಮಾರ್ಚನೆ, ಸ್ತೋತ್ರ ಪಠಣ, ಭಜನೆ, ಭಕ್ತಿ ಗೀತೆ ಪಾಲಕಿ ಸೇವೆಯೊಂದಿಗೆ ಮಂಗಳ ಹಾಡಲಾಯಿತು. ಶಂಕರರಾಚಾರ್ಯ ಮಹಾರಕಿ ಜೈ, ಜಯ ನಮಃ ಪಾರ್ವತಿ ಹರ ಹರ ಮಹಾದೇವ ಘೋಷಣೆಗಳು ಮೊಳಗಿದವು. ಪಂ.ವೆ0ಕಟೇಶಭಟ್ ಜೋಶಿ, ಪಂ.ಆನ0ದಶರ್ಮಾ ಭಟ್, ಡಾ.ಮಹಾದೇವ ದಿಕ್ಷೀತ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಮೂರು ದಿನಗಳ ಕಾಲ ನಡೆದವು.

ಶಂಕರಮಠದ ಶಾಖಾ ವ್ಯವಸ್ಥಾಪಕ ಶಿವರಾಮ ಹೆಗಡೆ , ಶಂಕರ ಸ್ವಾಧ್ಯಾಯ ಮಂಡಳಿ ಕಾರ್ಯದರ್ಶಿ ಕಿರಣ ಬಾಗಲಕೋಟ, ಡಾ.ಗಿರೀಶ ಮಾಸೂರಕರ, ವಸಂತ ಕುಲಕರ್ಣಿ, ರವಿ ಮಠ, ಸಂಜೀವ ಜೋಶಿ, ಸುನೀಲ ಮಠ, ಭೀಮಣ್ಣ ದಪ್ತರದಾರ, ವಿನೋದ ಪುರಾಣಿಕ, ಪೂರ್ಣಿಮಾ ಬಾಗಲಕೋಟೆ, ರಕ್ಷಾ ದೇಶಪಾಂಡೆ, ಪದ್ಮಾ ಮಠ, ಪ್ರೇಮಾ ಪುರಾಣಿಕ, ಗೀತಾ ಕುರುವಿನಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net