ಶಂಕರಲಿಂಗ ಬಡಾವಣೆಯಲ್ಲಿ ಭೂಕುಸಿತ

2 NRD-4
Published on

ನರಗುಂದ: ಪಟ್ಟಣದ ಶಂಕರಲಿಂಗ ಬಡಾವಣೆಯಲ್ಲಿ ಗುರುವಾರ ಏಕಾಏಕಿ ಭೂಕುಸಿತ ಉಂಟಾಗಿ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

ಬಡಾವಣೆಯ ಎಲಿಗಾರ ಸಂದಿಯ ಅಂಬೋಜಿ ಪೇಠೆ ಎಂಬವರ ಮನೆ ಮುಂದೆ ಭೂಕುಸಿತ ಸಂಭವಿಸಿದೆ. ಅಂದಾಜು 20 ಅಡಿ ಉದ್ದ, 5 ಅಡಿ ಅಗಲ ಸುತ್ತಳತೆಯ ಬೃಹತ್ ಗುಂಡಿ ಬಿದ್ದಿದೆ. ಕೆಲ ದಿನಗಳಿಂದ ನಿಂದ ಮುಂಗಾರು ಮಳೆ ಸುರಿಯುತ್ತಿದ್ದು, ಪಟ್ಟಣದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಳಗೊಂಡಿದೆ. ಇದೇ ಪಟ್ಟಣದಲ್ಲಿ ಆಗಾಗ್ಗೆ ಭೂಕುಸಿತ ಉಂಟಾಗಲು ಕಾರಣವೆನ್ನಲಾಗುತ್ತಿದೆ.

ಇದರಿಂದಾಗಿ ಪಟ್ಟಣದ ಜನರು ಜೀವ ಭಯದಲ್ಲಿ ಬದುಕುವ ಅನಿವಾರ್ಯತೆ ಸೃಷ್ಟಿಯಾಗಿದೆ. ಭೂಕುಸಿತದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಗುಂಡಿ ಮುಚ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net