ಶಂಕರ ಜಯಂತಿ ಆಚರಣೆ

26ark1
ಅರಕಲಗೂಡಿನಲ್ಲಿ ಶಂಕರ ಜಯಂತಿ ಪ್ರಯುಕ್ತ ಶಂಕರಾಚಾರ್ಯರ ರಥೋತ್ಸವ ನಡೆಯಿತು.
Published on

ಅರಕಲಗೂಡು; ಪಟ್ಟಣದ ಕೋಟೆ ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದ ಶಂಕರಾಲಯದಲ್ಲಿ ಮಂಗಳವಾರ ಶಂಕರ ಜಯಂತಿಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.

ಶಂಕರಾಚಾರ್ಯರ ಮೂರ್ತಿಗೆ ರುದ್ರಾಭೀಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬಳಿಕ ಅಲಂಕರಿಸಿದ ರಥದಲ್ಲಿ ಅಮೃತೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ಶಂಕರಾಚಾರ್ಯಕರ ಭಾವಚಿತ್ರವನ್ನು ಇರಿಸಿ ರಥ ಬೀದಿಯಲ್ಲಿ ರಥೋತ್ಸವ ನಡೆಸಲಾಯಿತು. ಜನರು ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಸಮರ್ಪಿಸಿದರು.

ರಥವು ಸ್ವಸ್ಥಾನ ಸೇರಿದ ಬಳಿಕ ದೇವಾಲಯದಲ್ಲಿ ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net