ವ್ಹೀಲಿಂಗ್‌ಗೆ ಮಾಡಿದರೆ ತಕ್ಕ ಪಾಠ: ಪೊಲೀಸ್ ಕಮೀಷನರ್ ಎಚ್ಚರಿಕೆ

29 Nela ph 03 Weeling Photo
Published on

ಮೈಸೂರು: ಯುವ ಪೀಳಿಗೆಯಲ್ಲಿ ವ್ಹೀಲಿಂಗ್ ಮಾಡುವ ಖಯಾಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕಲಾಗುತ್ತಿದೆ. ಈಗಾಗಲೇ ಹಲವಾರು ಪ್ರಕರಣಗಳಲ್ಲಿ ದಂಡ ವಿಧಿಸುವ ಜತೆಗೆ ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಮುಂದೆಯೂ ಕ್ರಮ ವಹಿಸಲಾಗುವುದು. ಕಾಲೇಜು, ಹಾಸ್ಟೆಲ್‌ಗಳ ವಿದ್ಯಾರ್ಥಿಗಳು ಹೆಚ್ಚಾಗಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲೂ ಇದನ್ನು ಹಾಕುತ್ತಿದ್ದಾರೆ. ಇದನ್ನು ಗಮನಿಸಿ ಪ್ರಕರಣ ದಾಖಲಿಸಲಾಗುವುದು. ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ, ತಂದೆ, ತಾಯಿಗೆ ಆಸ್ತಿ ಆಗಬೇಕಾದ ಮಕ್ಕಳು ವ್ಹೀಲಿಂಗ್ ಕ್ರೇಜ್‌ನಿಂದ ಪ್ರಾಣ ಕಳೆದುಕೊಳ್ಳಬಾರದು. ಕೆಲವರು ಬೈಕ್, ಕಾರುಗಳ ಸೈಲೆನ್ಸರ್ ವಿಕೃತಗೊಳಿಸಿ ಕರ್ಕಶ ಶಬ್ದ ಮಾಡುತ್ತಾ ಹೋಗುವುದು ಕಂಡುಬಂದಿದೆ. ಇಂಥವರ ಮೇಲೂ ಕ್ರಮ ವಹಿಸಲಾಗುವುದು ಎಂದು ರಮೇಶ್ ಬಾನೋತ್ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net