

ಚಿಕ್ಕಮಗಳೂರು: ನಗರಸಭೆ ಕಟ್ಟಡದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಜೈಭೀಮ್ ವ್ಯಾಯಾಮ ಶಾಲೆಯನ್ನು ಉದ್ಘಾಟಿಸಲು ಹಾಗೂ ಅಂಬೇಡ್ಕರ್ ಭವನ ನವೀಕರಣಕ್ಕೆ ದಲಿತ ಸಂಘಟನೆಗಳ ಒಕ್ಕೂಟ ೧೫ ದಿನದ ಗಡುವು ನೀಡಿದ್ದು, ತಪ್ಪಿದ್ದಲ್ಲಿ ಆಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೈಭೀಮ್ ವ್ಯಾಯಮಶಾಲೆ ಕಳೆದೆರಡು ವರ್ಷಗಳಿಂದ ಸಾರ್ವಜನಿಕರ ಉಪಯೋಗಕ್ಕೆ ಬಾರದೆ ನೆನಗುದಿಗೆ ಬಿದ್ದಿದೆ. ಉದ್ಘಾಟನೆ ಭಾಗ್ಯ ದೊರಕಿಲ್ಲ. ನಗರಸಭೆಯ ಅಧಿಕಾರಿಗಳು ಉz್ದೆÃಶಪೂರ್ವಕವಾಗಿ ಪರೋಕ್ಷವಾಗಿ ಅಂಬೇಡ್ಕರ್ ಹೆಸರಿಗೆ ಅಪಮಾನ ಮಾಡುವ ಕುತಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಎಲ್ಲ ದಲಿತ ಸಂಘಟನೆಗಳ ಸೇರಿ ಪ್ರತಿಭಟನೆ ನಡೆಸಿದ್ದರಿಂದ ಜೈಭೀಮ್ ವ್ಯಾಯಮ ಶಾಲೆ ಎಂದು ಅಂಗೀಕರಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸಂಬAಧಿಸಿದ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ವ್ಯಾಯಾಮ ಶಾಲೆ ತೆರೆಯಲು ಮುಂದಾಗಿಲ್ಲ. ಹಿಂದಿನ ನಗರಸಭೆ ಅಧ್ಯಕ್ಷರ ಗಮನಕ್ಕೂ ತರಲಾಗಿತ್ತು. ಆದಷ್ಟು ಬೇಗ ಉದ್ಘಾಟಿಸುವ ಭರವಸೆ ನೀಡಿದ್ದರು. ಆದರೂ ಯಾವ ಪ್ರಯೋಜನವಾಗಿಲ್ಲ. ೧೫ ದಿನದೊಳಗೆ ವ್ಯಾಯಾಮ ಶಾಲೆಯನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆದಿಡದಿದ್ದರೆ ನಗರಸಭೆ ಅಥವಾ ವ್ಯಾಯಾಮ ಶಾಲೆಯ ಎದುರು ಆಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಹೃದಯ ಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ. ಕಾರ್ಯಕ್ರಮ ನಡೆಸಲು ಈ ಭವನವನ್ನು ಬಾಡಿಗೆ ಪಡೆದವರು ನೆಮ್ಮದಿಯಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಸುಸಜ್ಜಿತ ಶೌಚಾಲಯಗಳಿಲ್ಲ. ಕೈತೊಳೆಯುವ ನಲ್ಲಿ ಮತ್ತು ತೊಟ್ಟಿಗಳು ಶಿಥಿಲಗೊಂಡಿವೆ. ಭವನದ ಹಿಂಭಾಗದಲ್ಲಿ ನೀರುನಿಂತು ಹಂದಿಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಸೊಳ್ಳೆಗಳು ಉತ್ಪಾದನಾ ಸ್ಥಳವಾಗಿ ಹೊರಹೊಮ್ಮುತ್ತಿದೆ. ವಿದ್ಯುತ್ ಉಪಕರಣಗಳು, ದೀಪಗಳು, ಫ್ಯಾನುಗಳ ದುರಸ್ಥಿಯಲ್ಲಿವೆ ಎಂದು ಸಮಸ್ಯೆಗಳನ್ನು ಪಟ್ಟಿಮಾಡಿದರು.
ಸಮಸ್ಯೆಗಳಿಗೆ ನಗರಸಭೆಯ ಅಧಿಕಾರಿಗಳೇ ಹೊಣೆಗಾರರಾಗಿದ್ದಾರೆ. ಹಲವು ಬಾರಿ ಅಂಬೇಡ್ಕರ್ ಭವನದ ಉಸ್ತುವಾರಿಯನ್ನು ಸಮಾಜಕಲ್ಯಾಣ ಇಲಾಖೆಗೆ ವಹಿಸಿಕೊಡಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಕಾರ್ಯಕ್ರಮಗಳಿಂದ ಬಂದ ಹಣ ಏನಾಗುತ್ತಿದೆ ಎಂಬುದೇ ತಿಳಿಯಲಾಗಿದೆ. ಕೂಡಲೇ ಭವನವನ್ನು ನವೀಕರಣಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಗರದ ಮೂರು ಮುಖ್ಯರಸ್ತೆಗಳಲ್ಲಿ ಒಂದಾದ ಅಂಬೇಡ್ಕರ್ ರಸ್ತೆ ಎಂದು ದಾಖಲೆಗಳಲ್ಲಿ ಬಳಸಲಾಗುತ್ತಿದೆ. ಹೆಸರು ಕರೆಯುತ್ತಿರುವುದು ಮಾರ್ಕೆಟ್ ರಸ್ತೆ ಎಂಬುದಾಗಿ, ನಗರಸಭೆಯ ಕೆಲವು ದಾಖಲೆಗಳಲ್ಲಿ ಮತ್ತು ಹರಾಜು ಪ್ರಕ್ರಿಯೆಗಳಲ್ಲಿ ಮಾರ್ಕೆಟ್ ರಸ್ತೆ ಎಂದು ಈಗಲೂ ಬಳಕೆಯಲ್ಲಿದೆ. ಅಂಗಡಿ ಮುಂಗಟ್ಟುಗಳ ನಾಮಫಲಕದಲ್ಲಿ ಮಾರ್ಕೆಟ್ ರಸ್ತೆ ಎಂದು ಬರೆಸಲಾಗುತ್ತಿದೆ. ೧೫ ದಿನದೊಳಗೆ ಎಲ್ಲಾ ನಾಮಫಲದಲ್ಲಿ ಅಂಬೇಡ್ಕರ್ ರಸ್ತೆ ಎಂದಿರಬೇಕು. ದಾಖಲೆಗಳಲ್ಲೂ ಅಂಬೇಡ್ಕರ್ ರಸ್ತೆ ಎಂದು ನಮೂದಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಮಾತನಾಡಿ, ಕತ್ರಿಮಾರಮ್ಮ ದೇವಾಲಯ ಬಳಿ ನಗರಸಭೆ ನಿರ್ಮಿಸಿರುವ ಮಳಿಗೆ ನಿರ್ಮಿಸಿದ್ದು, ಅದರಲ್ಲಿ ಒಂದು ಮಳಿಗೆಯನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ವರ್ಗದ ನಿರುದ್ಯೋಗ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗುವಂತೆ ನಿಗದಿಪಡಿಸಲಾಗಿತ್ತು. ಆದರೆ ಆ ಮಳಿಗೆಯನ್ನು ಸಾಮಾನ್ಯ ವರ್ಗದವರಿಗೆ ನೀಡಲು ನಗರಸಭೆ ಮುಂದಾದಾಗ ವಿರೋಧ ವ್ಯಕ್ತಪಡಿಸಿ ದಾಖಲೆನೀಡಿದಾಗ ಮಳಿಗೆಯನ್ನು ಬೇರೆಯವರಿಗೆ ನೀಡುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ ಎಂದರು.
ಈ ಮಳಿಗೆ ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಕೂಡಲೇ ಪರಿಶಿಷ್ಟಜಾತಿ ಮತ್ತು ವರ್ಗದ ನಿರುದ್ಯೋಗ ಯುವಕರಿಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕೆAದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಅಧ್ಯಕ್ಷ ಬಿ.ಎಂ.ರಘು, ಸಂವಿಧಾನ ಸಂರಕ್ಷಣಾ ವೇದಿಕೆಯ ಕೃಷ್ಣಮೂರ್ತಿ, ವಿವಿಧ ಸಂಘಟನೆ ಮುಖಂಡರಾದ ಅರುಣ್, ನಾಗೇಶ್ ಇದ್ದರು.