ವ್ಯಾಪಾರಿಗೆ ವಂಚಿಸಿದ್ದವನ ಬಂಧನ

Panipuri
Published on


ಚಾಮರಾಜನಗರ : ಗ್ರಾಹಕರ ಸೋಗಿನಲ್ಲಿ ಬಂದು ಪಾನಿಪುರಿ ಅಂಗಡಿ ವ್ಯಾಪಾರಿಗೆ 30 ಸಾವಿರ ರೂ. ವಂಚಿಸಿದ್ದ ಆರೋಪಿಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮೂಲದ ವಿಶಾಲ್ (19) ಬಂಧಿತ ಆರೋಪಿ. ಪಟ್ಟಣದ ಹಳೇ ಕುರುಬರ ಬೀದಿ ನಿವಾಸಿ ಲೋಕೇಶ್ ವಂಚನೆಗೊಳಗಾಗಿದ್ದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ರಸ್ತೆಯ ಲೋಕೇಶ್ ಪಾನೀಪುರಿ ಅಂಗಡಿಗೆ ಜ.24 ರಂದು ವಿಶಾಲ್ ತನ್ನ ಸ್ನೇಹಿತರೊಡನೆ ಭೇಟಿ ನೀಡಿ ಪಾನಿಪುರಿ ತಿಂದಿದ್ದರು. ಆನ್‌ಲೈನ್ ಪಾವತಿ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಆನಂತರ ನಿಮ್ಮ ಫೋನ್‌ನ ಸರ್ವರ್ ಬ್ಯುಸಿ ಇರುವುದ್ದರಿಂದ ಹಣ ಬರುತ್ತಿಲ್ಲ ಸರಿ ಮಾಡಿಕೊಡುತ್ತೇನೆ ಎಂದು ಹೇಳಿ ಮೊಬೈಲ್ ಪಡೆದು ಲೋಕೇಶ್ ಖಾತೆಯಿಂದ 30 ಸಾವಿರ ಹಣವನ್ನು ಬೇರೊಬ್ಬರ ಖಾತೆಗೆ ಕಳುಹಿಸಿ ವಂಚನೆ ಎಸಗಿದ್ದ. ಈ ಬಗ್ಗೆ ಚಾಮರಾಜನಗರ ಸಿಇಎನ್ ಪೊಲೀಸ್ ಠಾಣೆಗೆ ಲೋಕೇಶ್ ದೂರು ನೀಡಿದ್ದರು. ಪೊಲೀಸರು ವಿಶಾಲ್‌ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net