ವ್ಯಾಪಾರಿಗಳಿಂದ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

21
Published on

ಹೊಳೆನರಸೀಪುರ: ಪಟ್ಟಣದ ತರಕಾರಿ ಮಾರುಕಟ್ಟೆ ಹಾಗೂ ಕೋಟೆ ಮುಖ್ಯರಸ್ತೆಯ ವ್ಯಾಪಾರಿಗಳು ಮಂಗಳವಾರ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಿದ್ದರು.

ವಿಳ್ಳೇದೆಲೆ ವ್ಯಾಪಾರಿ ದೇವರಾಜು ಮಾತನಾಡಿ, ಜಾತಿ, ಧರ್ಮ, ಮತ, ಮೇಲು-ಕೀಳೆಂಬ ಭಾವನೆ ಇಲ್ಲದೆ ಎಲ್ಲರಿಗೂ ಅನ್ನ ದಾಸೋಹ, ವಿದ್ಯಾದಾನ ನೀಡಿದ್ದ ಡಾ.ಶಿವಕುಮಾರಸ್ವಾಮೀಜಿ ಅವರನ್ನು ಸ್ಮರಿಸುವುದೇ ಪುಣ್ಯದ ಕೆಲಸ ಎಂದರು.

ಶಿವಕುಮಾರಸ್ವಾಮೀಜಿ ಅವರು ಸದಾ ನಮ್ಮ ಜತೆಯಲ್ಲಿದ್ದಾರೆ ಎನ್ನುವ ಭಾವನೆ ನಮ್ಮಲಿದೆ. ಅವರು ನಮ್ಮೆಲ್ಲರ ಮನದಲ್ಲಿ ಚಿರಂಜೀವಿ ಎಂದು ಎಲೆ ರಾಜಣ್ಣ, ಸೂರಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾರುಕಟ್ಟೆಯ ಮಹಿಳಾ ವರ್ತಕರಾದ ಪಾರ್ವತಿ, ಭಾಗ್ಯಾ, ಜವರಮ್ಮ, ಅಂಬಿಕಾ, ಕಲಾ, ನಂದಿನಿ, ನಾಗರತ್ನಾ, ಪ್ರಭಾ, ವಿಯನ್(ಕೆಂಪ), ಉಮೇಶ, ಗೀತಾ, ಲಕ್ಷ್ಮೀ, ಚಂದ್ರಕಲಾ, ಮಂಜುಳಾ, ಆಶಾ, ವಿಜಯಾ, ಲೀಲಾವತಿ, ಅಶ್ವಿನಿ, ಲತಾ ವನಜಾಕ್ಷಿ, ಇತರರು ಭಾಗವಹಿಸಿದ್ದರು. 2 ಸಾವಿರಕ್ಕೂ ಹೆಚ್ಚು ಜನರು ದಾಸೋಹ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net