ವ್ಯಾಪಾರಿ ಆತ್ಮಹತ್ಯೆ

Published on

ಬಳ್ಳಾರಿ : ಸ್ಥಳೀಯ ವಿದ್ಯಾನಗರದ ನಿವಾಸಿ ವ್ಯಾಪಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಘಟನೆ ಮಂಗಳವಾರ ನಡೆದಿದೆ. ಮೂಲತಃ ಕುರುಗೋಡು ತಾಲೂಕಿನ ಎರ‌್ರಂಗಳಿ ಗ್ರಾಮದ ಪುಟ್ಟ ತಿಮ್ಮರೆಡ್ಡಿ( 59 )ಮೃತ. ಗ್ರಾಮದಲ್ಲಿ ಫರ್ಟಿಲೈಸರ್ ವ್ಯಾಪಾರಿಯಾಗಿದ್ದರು. ಅಂದಾಜು ಐದ ರಿಂದ ಆರು ಕೋಟಿ ರೂ. ಸಾಲ ಮಾಡಿಕೊಂಡಿದ್ದರು. ರೈತರಿಂದ ಮೆಣಸಿನಕಾಯಿ ಖರೀದಿಸಿ ಕೋಲ್ಡ್ ಸ್ಟೋರೆಜ್ ಇಟ್ಟಿದ್ದರು. ಆದರೆ ಮೆಣಸಿನಕಾಯಿ ಸೂಕ್ತ ಬೆಲೆ ಸಿಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net