ವ್ಯಾಪಾರಸ್ಥರಿಗೆ ನಗರಸಭೆ ಬಿಗ್ ಶಾಕ್

17ydg04
Published on

ಯಾದಗಿರಿ : ಕಳೆದ ನಾಲ್ಕು ದಶಕದಿಂದ ನಗರಸಭೆಯ ಮಳಿಗೆಗಳನ್ನು ಅತ್ಯಂತ ಕಡಿಮೆ ದರದಲ್ಲಿ ಪಡೆದು ಸಕಾಲಕ್ಕೆ ಬಾಡಿಗೆಯೂ ನೀಡದೆ ಸತಾಯಿಸುತ್ತಿದ್ದ ವ್ಯಾಪಾರಸ್ಥರಿಗೆ ಇಲ್ಲಿನ ನಗರಸಭೆ ಬಿಗ್ ಶಾಕ್ ನೀಡಿದೆ.

ನಗರದ ಗಾಂ ವೃತ್ತ ಸೇರಿದಂತೆ ವಿವಿಧ ಭಾಗದಲ್ಲಿ ನಗರಸಭೆಗೆ ಸೇರಿದ 88 ಮಳಿಗೆಗಳಿವೆ. ಅತ್ಯಂತ ಜನನಿಬಿಡ ಪ್ರದೇಶವಾದ ಗಾಂವೃತ್ತದಲ್ಲಿನ ಮಳಿಗೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಕಿರಾಣಿ ಸೇರಿದಂತೆ ಇನ್ನಿತರ ವ್ಯಾಪಾರ ನಡೆಸುತ್ತ ಬರಲಾಗಿದೆ. ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ನಗರಸಭೆಯ ಮಳಿಗೆಗಳನ್ನು ಬಾಡಿಗೆ ಪಡೆದು ವ್ಯಾಪಾರ ಮಾಡುತ್ತಿದ್ದ ಬಾಡಿಗೆದಾರರು, ಇತ್ತೀಚೆಗೆ ಬಾಡಿಗೆ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದರು.

ಬಾಡಿಗೆ ನೀಡುವಂತೆ ನಗರಸಭೆ ಹಲವು ಬಾರಿ ವ್ಯಾಪಾರಸ್ಥರಿಗೆ ನೋಟಿಸ್ ನೀಡಿದರು ಸಹ ಕೆಲವರು ಕ್ಯಾರೆ ಎಂದಿರಲಿಲ್ಲ. ಅಲ್ಲದೆ, ಈ ಪ್ರಕರಣ ಕೋಟರ್್ ಮೆಟ್ಟಿಲೇರಿ ವಿಚಾರಣೆ ನಡೆದು ಜು.07ರಂದು ನಗರಸಭೆ ಪರವಾಗಿ ತೀಪರ್ು ಬಂದಿತ್ತು. ಇದರಿಂದ ಕಾರ್ಯಪ್ರವೃತ್ತರಾದ ಪೌರಾಯುಕ್ತ ಸಂಗಪ್ಪ ಉಪಾಸೆ ಮಳಿಗೆಗಳನ್ನು ವಶ ಪಡಿಸಿಕೊಳ್ಳಲು 9 ಜನ ಸಿಬ್ಬಂದಿ, ಅಕಾರಿಗಳ ತಂಡ ರಚನೆ ಮಾಡಿದ್ದಾರೆ.

ಮೊದಲ ಹಂತವಾಗಿ 5 ಮಳಿಗೆಗಳನ್ನು ಶನಿವಾರ ಜಪ್ತಿ ಮಾಡಿಕೊಂಡಿರುವ ಈ ತಂಡ ಮುಂದಿನ ದಾಳಿಗೆ ಸನ್ನದ್ಧವಾಗಿದೆ. ಇದರಿಂದ ಹಲವು ವರ್ಷಗಳಿಂದ ನಗರಸಭೆಗೆ ಮಾಡಿಗೆ ನೀಡದೆ ಸತಾಯಿಸುತ್ತಿದ್ದ ವ್ಯಾಪಾರಸ್ಥರಿಗೆ ತೀವೃ ತಳಮಳ ಸೃಷ್ಠಿಯಾಗಿದೆ. ಒಟ್ಟು 88 ಮಳಿಗೆಗಳನ್ನು ಸಧ್ಯದ ಮಾರುಕಟ್ಟೆ ದರದಲ್ಲಿ ಹರಾಜು ಪ್ರಕ್ರಿಯೆ ಮೂಲಕ ಬಾಡಿಗೆ ನೀಡಿದರೆ ನಗರಸಭೆಗೆ ವಾಷರ್ಿಕ ಒಂದು ಕೋಟಿಗೂ ಹೆಚ್ಚು ಆದಾಯ ಬರಲಿದೆ. ಹೀಗಾಗಿ ಸಧ್ಯದಲ್ಲೇ ಪ್ಲ್ಯಾನ್-ಬಿ ಕಾಯರ್ಾಚರಣೆಗೆ ಅಣಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net