

ಕಲಬುರಗಿ: ನಗರದ ಗಂಜ್ ಬಸ್ ನಿಲ್ದಾಣದಲ್ಲಿ ಮಹಿಳೆಯ ವ್ಯಾನಿಟಿ ಬ್ಯಾಗ್ನಲ್ಲಿದ್ದ ೨.೯೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಡೆದಿದೆ. ಮುಸ್ಲಿಂ ಸಂ ಲಂಗರ ಹನುಮಾನ ದೇವಸ್ಥಾನ ಹತ್ತಿರದ ನಿವಾಸಿ ಜಬೇರಾ ಅ್ಜಲ್ ಅವರ ಬ್ಯಾಗ್ ಕಳ್ಳತನವಾಗಿದೆ. ಮೊಹರಂ ನಿಮಿತ್ತ ಸ್ವಗ್ರಾಮ ಅರಣಕಲ್ಗೆ ಹೋಗಲು ನೆಹರು ಗಂಜ್ ಬಸ್ ನಿಲ್ದಾಣಕ್ಕೆ ಬಂದಿದ್ದು, ಬಸ್ ಹತ್ತಿದ ನಂತರ ಬ್ಯಾಗ್ ನೋಡಿದಾಗ ಕಳ್ಳತನವಾಗಿರುವುದು ತಿಳಿದಿದೆ. ಬ್ಯಾಗ್ನಲ್ಲಿದ್ದ ಬಂಗಾರಚ ಗಲ್ಚೇರಿ, ಲಾಕೆಟ್, ಕಿವಿ ಓಲೆ, ಉಂಗುರ, ಬೆಳ್ಳಿಯ ಕಾಲು ಚೈನ್ ಸೇರಿ ೨.೯೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.