ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳ್ಳತನ

Crime Logo
Published on

ಕಲಬುರಗಿ: ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ೩ ಲP್ಷÀ ರೂ.ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನಡೆದಿದೆ. ಸೇಡಂನ ರೆಹಮತ್ ನಗರದ ಜರೀನಾಬೇಗಂ ಯೂಸೂï ಪಟೇಲ್ ಚಿನ್ನಾಭರಣ ಕಳೆದುಕೊಂಡ ಮಹಿಳೆ. ನಗರದ ಹಾಗರಗಾ ಕ್ರಾಸ್‌ನಲ್ಲಿರುವ ಸಂಬAಧಿಕರ ಮದುವೆಗೆ ಹೋಗಿದ್ದರು. ಬಂಗಾರದ ೨೦ ಗ್ರಾಂ ಸರ, ೨೦ ಗ್ರಾಂ ಎರಡು ಬಳೆ ಸೇರಿ ಅಂದಾಜು ಮೌಲ್ಯ ೩ ಲಕ್ಷ ರೂ. ಆಭರಣ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟುಕೊಂಡಿದ್ದರು. ಸೇಡಂ ಬಸ್ ನಿಲ್ದಾಣದಲ್ಲಿ ಬಸ್ ಏರಿದ್ದು, ನಗರದ ಟಿಪ್ಪು ಚೌಕ್ ಬಸ್ ನಿಲುಗಡೆ ಮಧ್ಯೆ ಕಳ್ಳರು ವ್ಯಾನಿಟಿ ಬ್ಯಾಗ್‌ನಲ್ಲಿನ ಚಿನ್ನಾಭರರ ಕಳ್ಳತನ ಮಾಡಿದ್ದಾರೆ ಎಂದು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net