ವ್ಯಸನ ಮುಕ್ತಿ, ಸೈಬರ್ ವಂಚನೆ ತಡೆ ಓಟ

0903KLB01
Published on

ಕಲಬುರಗಿ: ವ್ಯಸನ ಮುಕ್ತ ಕರ್ನಾಟಕ, ಸೈಬರ್ ವಂಚನೆ ತಡೆ ಜಾಗೃತಿಯೊಂದಿಗೆ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷ ವಾಕ್ಯದೊಂದಿಗೆ ನಗರದಲ್ಲಿ ಭಾನುವಾರ ಬೆಳಗ್ಗೆ ಸಾವಿರಾರು ಜನರ ಓಟ ನಡೆಯಿತು. ನಗರ, ಜಿಲ್ಲಾ ಪೊಲೀಸ್, ನಾಗನಹಳ್ಳಿ ತರಬೇತಿ ಕಾಲೇಜು, ಕೆಎಸ್‌ಆರ್‌ಪಿ ಪಡೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಬೃಹತ್ ಮ್ಯಾರಾಥಾನ್ ಓಟದಲ್ಲಿ ಸಾವಿರಾರು ಪೊಲೀಸರು, ಸಾರ್ವಜನಿಕರು, ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದರು.

ನಗರದ ಡಿಎಆರ್ ಮೈದಾನದಿಂದ ಆರಂಭವಾದ ಓಟವೂ ಏಷಿಯನ್ ಮಾಲ್, ಐವಾನ್ ಇ ಶಾಹಿ ಅತಿಥಿ ಗೃಹ, ಡಿಸಿ ಕಚೇರಿ, ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತ, ಆನಂದ ಹೊಟೇಲ್, ಶಹಾಬಜಾರ್ ವೃತ್ತ, ಪ್ರಕಾಶ ಏಷಿಯನ್ ಮಾಲ್, ಚೌಕ್ ಪೊಲೀಸ್ ಠಾಣೆ, ಮಾರ್ಕೆಟ್ ಜಗತ್ ಮಾರ್ಗವಾಗಿ ಪುನಃ ಮೈದಾನಕ್ಕೆ ೧೦ ಕಿ.ಮೀ.ಓಟ ತಲುಪಿತು. ಐದು ಕಿ.ಮೀ ಓಟವೂ ಪ್ರತ್ಯೇಕವಾಗಿ ನಡೆಯಿತು.

ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ಓಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಡೆಕ್ಕಾ ಕಿಶೋರಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಡಿಸಿಪಿ ಪ್ರವೀಣ ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net