

ಚಿಕ್ಕಮಗಳೂರು: ಮದ್ಯಸೇವನೆಯನ್ನು ತ್ಯಜಿಸಲು ಮದ್ಯವ್ಯಸನ ಮುಕ್ತಿಕೇಂದ್ರಕ್ಕೆ ದಾಖಲಾಗಿದ್ದ ವ್ಯಕ್ತಿಯ ಹಲ್ಲೆ ನಡೆದಿದ್ದು, ಶೇ.೭೦ರಷ್ಟು ಕಿವಿಯ ತಮಟೆಗೆ ಹಾನಿಯಾಗಿದೆ. ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂಡಿಗೆರೆ ತಾಲೂಕು ಹಳಿಕೆ ಗ್ರಾಮದ ಎಚ್.ಪಿ. ಸತೀಶ್ ಮದ್ಯವ್ಯಸನ ಮುಕ್ತಿಕೇಂದ್ರಕ್ಕೆ ಮಾರ್ಚ್ ೩೦ ರಂದು ಬೆಳಗ್ಗೆ ೧೧.೩೦ಕ್ಕೆ ದಾಖಲಾಗಿದ್ದರು. ಅಂದು ಮಧ್ಯಾಹ್ನ ಎದೆನೋವು ಕಾಣಿಸಿಕೊಂಡಿದ್ದು, ಕೇಂದ್ರದ ಮೇಲ್ವಿಚಾರಕರಿಗೆ ಆಸ್ಪತ್ರೆಗೆ ಕರೆದೊಯ್ಯುವಂತೆ ಕೋರಿದಾಗ ಕೇಂದ್ರ ಸಿಬ್ಬಂದಿ ನಿರ್ಲಕ್ಷö್ಯ ಮಾಡಿದ್ದು, ನೋವು ಹೆಚ್ಚಾದಾಗ ಕೂಗಾಡಿದ್ದಕ್ಕೆ ಅಲ್ಲಿದ್ದ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಇದದ್ದರಿಂದ ಸತೀಶ್ ಕಿವಿಯ ತಮಟೆಗೆ ಹಾನಿಯಾಗಿದೆ. ಸಂಜೆವೇಳೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಕಿವಿಯ ತಮಟೆಗೆ ಶೇ.೭೦ ರಷ್ಟು ಹಾನಿಯಾಗಿರುವುದಾಗಿ ತಿಳಿಸಿದ್ದಾರೆ ಎಂದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಗರಠಾಣಾ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದಾರೆ. ದೂರಿನ ಅರ್ಜಿ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಮೊರೆಹೋಗುವಂತೆ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುತ್ತಿರುವುದಾಗಿ ಹೇಳಿದರು.
ಸಂಬAಧಿಸಿದ ಅಧಿಕಾರಿಗಳು ತನಿಖೆಗೆ ನಡೆಸಬೇಕು. ಹಲ್ಲೆ ನಡೆಸಿರುವ ಕೇಂದ್ರದ ಸಿಬ್ಬಂದಿಯನ್ನು ಕೂಡಲೇ ಬಂಧಿಸಬೇಕು. ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರಘು, ಹಲ್ಲೆಗೊಳಗಾದ ಎಚ್.ಪಿ. ಸತೀಶ್, ಆತನ ಸಹೋದರ ಮಂಜುನಾಥ, ಹಳಿಕೆ ಗ್ರಾಮದ ಮಹೇಶ್, ಜಗದೀಶ್ ಇದ್ದರು.