ವ್ಯವಹಾರ ಜ್ಞಾನ ಬೆಳೆಯಲು ಸಹಕಾರಿ

ವ್ಯವಹಾರ ಜ್ಞಾನ ಬೆಳೆಯಲು ಸಹಕಾರಿ
Published on


ಚನ್ನರಾಯಪಟ್ಟಣ: ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಯಲು ಇಂತಹ ವೇದಿಕೆಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು ಹೇಳಿದರು.


ಪಟ್ಟಣದ ನವೋದಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಹಾಗೂ ಆಹಾರ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣದ ಜತೆಗೆ ವ್ಯವಹಾರಿಕ ಜ್ಞಾನ ಕಲಿಸುವುದು ಅತಿಮುಖ್ಯವಾಗಲಿದೆ ಎಂದರು.


ಉತ್ತಮ ಹಾಗೂ ಮೌಲ್ಯಯುತ ಶಿಕ್ಷಣದಿಂದ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು ವಿನಃ ಸರ್ಕಾರಿ ಉನ್ನತ ಹುದ್ದೆಗಳ ನಿರೀಕ್ಷೆ ಇರಬಾರದು. ಈ ಸಮಾಜದಲ್ಲಿ ನಾವು ಒಳ್ಳೆಯ ಬದುಕು ಕಟ್ಟಿಕೊಳ್ಳುವುದರ ಜತೆಗೆ ನೆರೆ-ಹೊರೆಗೆ ಆಶಯವಾಗುವ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಟೇಬಲ್ ವ್ಯವಸ್ಥೆ ಮಾಡಿಕೊಂಡು ಪಾನಿಪೂರಿ, ಬೇಲ್‌ಪೂರಿ, ಸಮೋಸ, ಜೆಲ್ಲಿ, ಹಲ್ವಾ, ಚಕ್ಕುಲಿ, ನಿಪ್ಪಿಟ್ಟು, ಚುರುಮುರಿ, ಎಳನೀರು, ಸಲಾಡ್, ಮಿಠಾಯಿ, ಬಿಸ್ಕೆಟ್, ಗೋಲ್ಗಪ್ಪ, ಚಾಕೋಲೇಟ್ ಹಾಗೂ ವಿವಿಧ ಸಿಹಿ ತಿನಿಸುಗಳನ್ನು ಮಾರಾಟ ಮಾಡಿದರು.


ಅಲ್ಲದೇ ಮತ್ತೊಂದೆಡೆ ಸೇಬು, ಕಿತ್ತಳೆ, ಸೀಬೆ, ಸಪೋಟ, ಮೂಸಂಬಿ, ಪಪ್ಪಾಯಿ, ದಾಳಿಂಬೆ, ಬಾಳೆಹಣ್ಣು ಹಾಗೂ ದ್ರಾಕ್ಷಿ ಅಲ್ಲದೆ ಬೀನ್ಸ್, ಟಮೊಟೋ, ನುಗ್ಗೆಕಾಯಿ, ಈರೆ, ಸೋರೆ, ಪಡುವಲ ಕಾಯಿ, ಹಾಗಲಕಾಯಿ ಕಾಯಿ ಹಾಗೂ ವಿವಿಧ ತರಕಾರಿ ಮತ್ತು ಸೊಪ್ಪುಗಳನ್ನು ಜೋಡಿಸಿಟ್ಟು ಸಂತೆ ಮಾದರಿಯಲ್ಲಿ ಗ್ರಾಹಕರನ್ನು ತಮ್ಮತ್ತ ಕರೆದು ಆಕರ್ಷಕ ರೀತಿಯಲ್ಲಿ ವ್ಯಾಪಾರ ಮಾಡಿದರು.


ಪೋ?ಕರು ಹಾಗೂ ಗ್ರಾಹಕರು ತಮಗೆ ಬೇಕಾದ ವಸ್ತು ಮತ್ತು ತಿನಿಸುಗಳನ್ನು ಖರೀದಿಸಿದರು. ನವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಆಧಿಶೇ?್ ಕುಮಾರ್, ಕಾರ್ಯದರ್ಶಿ ಎಚ್.ಎನ್.ನವೀನ್, ನಿರ್ದೇಶಕ ಸುರೇಶ್, ಪ್ರಾಂಶುಪಾಲ ಕಾಂತರಾಜು, ಮುಖ್ಯ ಶಿಕ್ಷಕಿ ಜಾನಕಮ್ಮ, ಅಂತರ್ ರಾಷ್ಟ್ರೀಯ ಕ್ರೀಡಾಪಟು ಬರಾಳು ಪ್ರಕಾಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ್, ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net