ವ್ಯಕ್ತಿತ್ವ ವಿಕಸನಕ್ಕೆ ಎನ್‌ಎಸ್‌ಎಸ್ ಸಹಕಾರಿ

13 HBD 1
 ಚಿಟಗುಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವನ್ನು ಸಿಪಿಐ ಶ್ರೀನಿವಾಸ ಅಲ್ಲಾಪುರ ಉದ್ಘಾಟಿಸಿದರು. ಅಪರ್ಣ ಶೆಟ್ಟಿ, ಡಾ.ಜಯಕುಮಾರ ಸಿಂಧೆ ಇತರರಿದ್ದರು.
Published on

ಚಿಟಗುಪ್ಪ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವದ ಗುಣ ಬೆಳೆಸುವ ಮೂಲಕ ವ್ಯಕ್ತಿತ್ವ ವಿಕಸನಗೊಳ್ಳುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸಹಕಾರಿ ಎಂದು ವೃತ್ತ ನಿರೀಕ್ಷಕ ಶ್ರೀನಿವಾಸ ಅಲ್ಲಾಪುರ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀದರ್ ವಿಶ್ವವಿದ್ಯಾಲಯ, ಕಲಬುರಗಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಿಬಿರದಲ್ಲಿ ಹಮ್ಮಿಕೊಂಡಿದ್ದ ಚಟುವಟಿಕೆಗಳಿಂದ ವಿಜ್ಞಾನದ ಅರಿವು ಹಾಗೂ ವೈಜ್ಞಾನಿಕ ಮನೋಭಾವನೆ ಮೂಡುತ್ತದೆ ಎಂದರು.

ಹುಮನಾಬಾದ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಅಪರ್ಣ ಶೆಟ್ಟಿ ಮಾತನಾಡಿ, ಶಿಕ್ಷಣಕ್ಕಿಂತ ಸಂಸ್ಕಾರ ಮುಖ್ಯ. ಇಂದು ಸಮಾಜಘಾತಕ ಶಕ್ತಿಗಳಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ರಾಷ್ಟ್ರ ಭಕ್ತಿ ಮೂಡಿಸುವ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಜಯಕುಮಾರ ಸಿಂಧೆ ಮಾತನಾಡಿದರು. ಎನ್‌ಎಸ್‌ಎಸ್ ಅಧಿಕಾರಿ ಶಾಂತಕುಮಾರ ಪಾಟೀಲ ವರದಿ ಮಂಡಿಸಿ ಒಂದು ವಾರ ನಡೆದ ಶಿಬಿರದಲ್ಲಿ ೧೦೦ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶ್ರಮದಾನ, ಸಂಪನ್ಮೂಲ ತಜ್ಞರಿಂದ ವಿಶೇಷ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಜಾಗೃತಿ ಮೂಡಿಸುವ ರೂಪಕ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ, ಪ್ರತಿ ನಿತ್ಯ ಊಟದ ವ್ಯವಸ್ಥೆ, ಮನರಂಜನೆ ಕಾರ್ಯಕ್ರಮ ಸೇರಿ ಹಲವು ಅರ್ಥಪೂರ್ಣ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು ಎಂದರು.

ಪುರಸಭೆ ಸದಸ್ಯ ವಿಶಾಲ ಭುರಾಳೆ, ಮುಖಂಡರಾದ ನರಸಪ್ಪ, ಸಿಬ್ಬಂದಿ ಕಾರ್ಯದರ್ಶಿ ಡಾ.ಕೆ.ಶಿವಕುಮಾರ, ಪ್ರಾಧ್ಯಾಪಕರಾದ, ಡಾ.ಚಿತ್ರಶೇಖರ ಚಿರಳ್ಳಿ, ಡಾ.ಸತೀಶಕುಮಾರ ಡೋಂಗ್ರೆ, ಡಾ.ರವೀಂದ್ರಕುಮಾರ ಟಿಳೆಕರ, ಡಾ.ಮೀನಾಕ್ಷಿ, ಡಾ.ಸಯೀದಾ ಬಾನು, ಡಾ.ಶೇಷರಾವ, ರಮೇಶಕುಮಾರ ಬಿರಾದಾರ, ಡಾ.ಪವನಕುಮಾರ, ಡಾ.ಭಾರತಿ ಪಾಟೀಲ, ಡಾ.ಶ್ವೇತಾ, ಮೇಹಜಬಿನ, ಇತರರಿದ್ದರು.

ಅನೀಲಕುಮಾರ ಸಿಂಧೆ ನಿರೂಪಣೆ ಮಾಡಿದರು. ಡಾ.ವೀರಶೆಟ್ಟಿ ಮೈಲೂರಕರ ವಂದಿಸಿದರು.

ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಶಿಬಿರಾರ್ಥಿಗಳಿಗೆ ಹಾಗೂ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net