ವ್ಯಕ್ತಿತ್ವ ಬೆಳವಣಿಗೆಯತ್ತ ಗಮನಹರಿಸಲಿ

25Snk1 MUST
Published on

ಸಂಕೇಶ್ವರ: ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಜತೆಗೆ ವ್ಯಕ್ತಿತ್ವ ಬೆಳವಣಿಗೆಯತ್ತ ಗಮನಹರಿಸಬೇಕು. ಪಠ್ಯದ ಜತೆಗೆ ಬದುಕಿನ ಮೌಲ್ಯ ಹಾಗೂ ಶಿಸ್ತು ರೂಪಿಸುವ ವೇದಿಕೆಯಾಗಬೇಕು ಎಂದು ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್.ಎಸ್.ಸೀತಾರಾಮು ತಿಳಿಸಿದರು.

ಇಲ್ಲಿಯ ಬ್ರಿಲಿಯಂಟ್ ಸಿಬಿಎಸ್‌ಇ ಶಾಲೆಗೆ ಮಂಗಳವಾರ ಭೇಟಿ ನೀಡಿ ಶಿಕ್ಷಕರನ್ನುದ್ದೇಶಿಸಿ ಮಾತನಾಡಿ, ಬದುಕಿನ ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಪೂರಕವಾಗಿ ತಯಾರಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಈ ದೃಷ್ಟಿಯಿಂದ ಜೀವನ ಪಾಠಗಳನ್ನು ಪರಿಚಯಿಸಬೇಕು. ಬ್ರಿಲಿಯಂಟ್ ಶಾಲೆ ಸುಂದರ ಪರಿಸರದಲ್ಲಿದ್ದು, ಜ್ನ್ಯಾನಾರ್ಜನೆಗೆ ಧನಾತ್ಮಕ ವಾತಾವರಣ ಹೊಂದಿದೆ. ಮುಂಬರುವ ದಿನಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಲು ಕಾರ್ಯಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ಜಿಹೆಚ್‌ಎಸ್ ಮುಖ್ಯ ಶಿಕ್ಷಕ ಎಸ್.ಡಿ.ನಾಯಿಕ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಬಗ್ಗೆ ಕಾಳಜಿಯುಳ್ಳ ಉಪನಿರ್ದೇಶಕರ ಮಾರ್ಗದರ್ಶನ ದೊರೆತಿರುವುದು ಈ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಉಡುಗೊರೆಯಾಗಿದ್ದು, ಶಿಕ್ಷಕರಿಗೆ ಮಾರ್ಗದರ್ಶನ ನೀಡುವ ಮೂಲಕ ಎಲ್ಲ ಶಿಕ್ಷಕರಲ್ಲಿ ಉತ್ಸಾಹ ತುಂಬಿದ್ದರೆ ಎಂದರು.

ಡಿಡಿಪಿಐ ಆರ್.ಎಸ್. ಸೀತಾರಾಮು ಅವರನ್ನು ಸಂಸ್ಥೆ ಅಧ್ಯಕ್ಷ ಪವನ ಕಣಗಲಿ ಸನ್ಮಾನಿಸಿದರು. ವಿಷಯ ಪರೀಕ್ಷಕ ಬಿ.ಎಸ್.ಖಾಡೆ, ಆಡಳಿತಾಽಕಾರಿ ವಿನಯ ಹಾಲದೇವರಮಠ, ನಿರ್ದೇಶಕ ಶಶಾಂಕ ಮಾಳಿ, ಪ್ರಾಚಾರ್ಯೆ ನಸೀಮಾ ಢಾಂಗೆ ಮತ್ತು ಶಿಕ್ಷಕ ಸಿಬ್ಬಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net