

ಮೈಸೂರು: ಜೀವನದಲ್ಲಿ ವ್ಯಕ್ತಿಗತ ಭಾರವನ್ನು ಕಳಚಿಕೊಂಡಾಗಲೇ ಸುಖ, ಸಂತೋಷ ದೊರೆಯುತ್ತದೆ ಎಂದು ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಹೇಳಿದರು.
ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಜೀವನ ಮೌಲ್ಯ’ ಕುರಿತು ಮಾತನಾಡಿದರು.
ಮನಸ್ಸು ಸುಖಿಯಾಗುವುದು ಯಾವಾಗ? ಆದರೆ, ಅದುವೇ ದೊರೆಯುತ್ತಿಲ್ಲ. ಪ್ರತಿಯೊಬ್ಬರೂ ವ್ಯಕ್ತಿ ಭಾರ, ಲೋಕಭಾರವನ್ನು ಹೊತ್ತುಕೊಂಡಿದ್ದೇವೆ. ಈ ಭಾರವನ್ನು ಕಳಚಿದಾಗ ಸುಖ ಸಿಗುತ್ತದೆ. ಮನಸ್ಸು ಸದಾ ತಾಜಾತನದಿಂದ ಇರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಇದು ಎಲ್ಲರಿಗೂ ಗೊತ್ತು. ಆದಾಗ್ಯೂ, ಅದನ್ನು ಸಾಧಿಸಲು ಆಗುತ್ತಿಲ್ಲ ಎಂದರು.
ಪ್ರಕೃತಿ ನೋಡಿದಾಗ ಮನಸ್ಸು ಉಲ್ಲಸಿತವಾಗುತ್ತದೆ ಏಕೆ? ಅದು ತನ್ನ ಪಾಡಿಗೆ ಇರುತ್ತದೆ. ಅದು ತನ್ನನ್ನು ತಾನು ತೋರಿಸಿಕೊಳ್ಳಲು ಪ್ರಯತ್ನಿಸಲ್ಲ. ನಾವುಗಳು ಸಹ ನಮ್ಮ ಪಾಡಿಗೆ ಇದ್ದರೆ ಸುಖವಾಗಿರಬಹುದು. ಬೇರೆಯವರನ್ನು ಮೆಚ್ಚಿಸಲು ಹೋಗಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತೇವೆ. ಇದುವೇ ಭಾರ. ಸರಿಯಾಗಿ ಕೆಲಸ ಮಾಡಿ. ತನಗೇ ತಾನೇ ಮೆಚ್ಚಿಗೆ ದೊರೆಯುತ್ತದೆ. ಇನ್ನೊಬ್ಬರ ಮನಸ್ಸಿಗೆ ಕೈ ಹಾಕಿದರೆ ತಮ್ಮ ಸಂತೋಷ ಕಳೆದುಕೊಳ್ಳುವ ದಾರಿ ಎಂದರು.
ತೋರಿಕೆಯ ಜೀವನಕ್ಕೆ ಅರ್ಥವಿಲ್ಲ. ಅದುವೇ ಈಗಿನ ಸಮಸ್ಯೆಯಾಗಿದೆ. ಮನಸ್ಸು ವಿಲಾಸಿ. ಅದು ಸದಾ ಬದಲಾಗುತ್ತಿರುತ್ತದೆ. ಅದು ಹೊರಗಿನವರಿಗೆ ಗೊತ್ತಾಗಲ್ಲ. ಅದು ಒಳಗಿನವರಿಗೆ ಗೊತ್ತಿರುತ್ತದೆ. ಜೀವನ ಈಗ ನಟನೆ. ಇದನ್ನು ಕಲಿಯಲು ಶಾಲೆ ಬೇಕಿಲ್ಲ. ಜೀವನ, ಲೋಕವೇ ಸಾಕು. ನಟನೆಗೆ ದೇವರು ಪ್ರೇಕ್ಷಕನಲ್ಲ ಎಂದರು.
ಜೀವನವೇ ಮೌಲ್ಯ, ಅದು ಅಮೂಲ್ಯ ಸಹ. ಅದಕ್ಕೆ ಬೆಲೆ ಕಟ್ಟಲಾಗದು. ಆದರೆ, ಲೋಕವೆಲ್ಲ ಬೆಲೆ ಕಟ್ಟುವುದರಲ್ಲಿ ಪಳಗಿದೆ. ಬೆಲೆ ಕಟ್ಟುವುದು ಎನ್ನುವ ವಾತು ವ್ಯಾಪಾರೀಕರಣದ ನುಡಿಗಟ್ಟು. ಮನುಷ್ಯನ ನೆನಪಿಗಿಂತ ಆತನ ಜೀವನ ಅಮೂಲ್ಯವಾದದ್ದು ಎಂದರು.
ಯಾವುದರಲ್ಲಿ ಜೀವ ಇಲ್ಲವೋ ಅದರಲ್ಲಿ ಜೀವ ಇದೆ ಎಂದು ಅರ್ಥವಾದರೆ ಅದು ಆಧ್ಯಾತ್ಮಿಕ. ಜೀವ ಇದ್ದದ್ದನ್ನು ಜೀವ ಇಲ್ಲದ ಹಾಗೆ ಬಳಸಿಕೊಂಡರೆ ಅದು ಲೌಕಿಕ ನರಕ. ಈಗ ನಾವು ಇದನ್ನೇ ವಾಡುತ್ತಿದ್ದೇವೆ. ನಾವು ಇದನ್ನು ನೆನಪಿಸಬೇಕು. ನೆನಪಿಸುವುದು ಕೂಡ ಒಂದು ವಾತು. ನಾವು ಏನೇ ವಾಡಿದರೂ ಅದು ನಮ್ಮ ಮೂಲಕವೇ ಆಗಬೇಕು. ನಾವು ಬದಲಾದರೆ ಲೋಕ ಹಾಗೂ ಯುಗವೇ ಪರಿವರ್ತನೆಯಾಗುತ್ತದೆ ಎಂದರು.
ವಾತು ಹೇಗಿರಬೇಕೆಂದರೆ ‘ಮನಕ್ಕೆ ನಾಚದ ವಚನ, ವಚನಕ್ಕೆ ನಾಚುವ ಮನ’ದ ಹಾಗೆ ಇರಬೇಕು. ಅಂದರೆ, ನಮ್ಮ ಮನಸ್ಸಿಗೆ ಒಲ್ಲದ ಹಾಗೂ ಕೃತಕವಾದ ವಾತನ್ನು ಆಡಿದರೆ ನಮ್ಮ ಮನಸ್ಸು ಅದಕ್ಕೆ ನಾಚಿಕೊಳ್ಳುತ್ತದೆ. ನಮ್ಮ ಮನಸ್ಸಿಗೆ ವಿರೋಧವಾದ ವಾತನ್ನು ವಾತನಾಡದಿದ್ದರೆ ಹಾಗೂ ನಾವೇ ಆಡುವ ವಚನಕ್ಕೆ ನಮ್ಮ ಮನಸ್ಸು ನಾಚದಿರಬೇಕು ಎಂದು ಹೇಳಿದರು.
ಮೊಬೈಲ್‌ಗೆ ಜಂಗಮವಾಣಿ ಎಂದು ಕನ್ನಡೀಕರಣಗೊಳಿಸಿರುವುದಕ್ಕೆ ಬೇಜಾರು ಇದೆ. ಈ ಹೆಸರು ಸೂಕವಲ್ಲ. ಇದನ್ನು ಬದಲಿಸಬೇಕು. ಜಂಗಮವಾಣಿ ಎಂದರೆ ವಚನ ಸಾಹಿತ್ಯವನ್ನು ಸೂಚಿಸುತ್ತದೆ ಎಂದರು.