ವೈಷ್ಣವಿಗೆ ನಂಬಿಯಾರ್ ಚಿನ್ನದ ಪದಕ

24-2
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರಿಂದ ಚಿನ್ನದ ಪದಕ ಪಡೆದ ವೈಷ್ಣವಿ ಪಿ.ವಿಭೂತೆ. ಎಂ.ಆರ್. ಕುಲಕರ್ಣಿ, ಎ.ಎಚ್. ಹವಾಲ್ದಾರ, ಪ್ರಕಾಶ, ಅಪರ್ಣಾ, ಗುರುಪ್ರಸಾದ್ ವಿಭೂತೆ ಇದ್ದರು.
Published on

ಬೆಳಗಾವಿ: ಭಾರತೀಯ ಸಂವಿಧಾನದ ಕಾನೂನಿನ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಕೊಡಮಾಡುವ ಎಂ.ಕೆ. ನಂಬಿಯಾರ್ ಸ್ಮಾರಕ ಚಿನ್ನದ ಪದಕವನ್ನು 2021-22ನೇ ಸಾಲಿನಲ್ಲಿ ಬೆಳಗಾವಿಯ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ 3ನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿ ವೈಷ್ಣವಿ ಪಿ.ವಿಭೂತೆ ಪಡೆದುಕೊಂಡಿದ್ದಾರೆ.

ಅಟಾರ್ನಿ ಜನರಲ್, ಪದ್ಮವಿಭೂಷಣ ಕೆ.ಕೆ. ವೇಣುಗೋಪಾಲ್ ಅವರು ಎಂ.ಕೆ.ನಂಬಿಯಾರ್ ಸ್ಮಾರಕ ಚಿನ್ನದ ಪದಕ ಸ್ಥಾಪಿಸಿದ್ದಾರೆ. ಸಂವಿಧಾನದ ಕಾನೂನಿನ ವಿಷಯದಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗೆ ಸ್ಮಾರಕ ಬಹುಮಾನ ನೀಡಲಾಗುತ್ತದೆ. ಈ ಬಹುಮಾನ ವೈಷ್ಣವಿ ಪಿ.ವಿಭೂತೆ ಪಾಲಾಗಿದೆ. 200 ಅಂಕಗಳಲ್ಲಿ 142 ಅಂಕ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಆರ್.ಎಲ್.ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಎ.ಎಚ್. ಹವಾಲ್ದಾರ, ಪ್ರಕಾಶ, ಅಪರ್ಣ, ಗುರುಪ್ರಸಾದ್ ವಿಭೂತೆ ಸೇರಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net