ಮೈಸೂರು: ಬಿತ್ತನೆ ಬೀಜ ಕುರಿತು ರೈತರು ಸ್ವಾವಲಂಬಿಯಾಗಬೇಕು. ವೈವಿಧ್ಯಮಯ ತಳಿ ಬೀಜಗಳನ್ನು ಸಂರಕ್ಷಣೆ ಮಾಡಬೇಕು ಎಂದು ನಿವೃತ್ತ ವಿಜ್ಞಾನಿ ಡಾ.ಯು.ಎಂ. ಚಂದ್ರಶೇಖರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ ಅಧ್ಯಂುನ ವಿಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕೃಷಿಂುಲ್ಲಿ ಸ್ಥಳೀಂು ಮತ್ತು ಉತ್ಕೃಷ್ಟ ಬೀಜಗಳ ಮಹತ್ವ’ ಕುರಿತಾದ ಕಾರ್ಯಾಗಾರದಲ್ಲಿ ವಾತನಾಡಿದರು.
ಮನುಷ್ಯರಾದ ನಾವು ತಿಂಗಳುಗಟ್ಟಲೇ ವಿವಿಧ ತಳಿಂು ಬೀಜಗಳನ್ನು ಸಂರಕ್ಷಣೆ ಮಾಡುತ್ತೇವೆ. ಪ್ರಕೃತಿಯೂ ಬೀಜಗಳನ್ನು ಸಂರಕ್ಷಿಸಿ ತನಗೆ ಬೇಕಾದಾಗ ಬಳಸಿಕೊಳ್ಳುತ್ತದೆ. ಈ ಹಿನ್ನೆಲೆಂುಲ್ಲಿ ತಮ್ಮದೇ ಆದ ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಲು ರೈತರು ಮುಂದಾಗಬೇಕು ಎಂದರು.
ಸುಸ್ಥಿರ ಕೃಷಿಗೆ ಬೀಜವು ಮೂಲಸತ್ವ ಮತ್ತು ಅತ್ಯಂತ ನಿರ್ಣಾಂುಕ ಅಂಶವಾಗಿದೆ. ಬೆಳೆ ಅಥವಾ ಗಿಡದ ಆರೋಗ್ಯ ಬೀಜಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಸಲಿನ ಉತ್ಪಾದನೆ ಹಾಗೂ ಉತ್ತಮ ಇಳುವರಿಗೆ ಗುಣಮಟ್ಟದ ಬೀಜದ ನೇರ ಕೊಡುಗೆ ಇದೆ ಎಂದರು.
ಮನುಷ್ಯ ಕೃಷಿಂುನ್ನು ಆರಂಭಿಸಿದಾಗಿನಿಂದಲೂ ಅನೇಕ ತಳಿಂು ಬೀಜಗಳ ಸಂಶೋಧನೆ ಆಗಿದೆ. ಪೂರ್ವಜರು ವೈವಿಧ್ಯಮಯ ತಳಿಗಳನ್ನು ಸಂರಕ್ಷಿಸಿದ್ದರು. ಕೆಲವೆಡೆ ಈಗಲೂ ಅಂದಿನ ಪದ್ಧತಿಂುನ್ನು ಅನುಸರಿಸಿ ಬೀಜಗಳನ್ನು ಸಂರಕ್ಷಿಸಲಾಗುತ್ತಿದೆ ಎಂದರು.
ಮೈವಿವಿ ಸಸ್ಯಶಾಸ ಅಧ್ಯಂುನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ.ಆರ್. ಜನಾರ್ಧನ್, ಬೀಜಗಳಿಗೆ ಬ್ರಹ್ಮಾಂಡ ಶಕ್ತಿ ಇದೆ. ಅದು ಸೃಷ್ಟಿಂು ಜೀವಂತಿಕೆ ಕೂಡ. ಕೃಷಿ ಚಟುವಟಿಕೆಗೆ ಬೀಜವೇ ಬುನಾದಿಯಾಗಿದೆ ಎಂದು ತಿಳಿಸಿದರು.
ಮೈವಿವಿ ಕುಲಸಚಿವೆ ವಿ.ಆರ್. ಶೈಲಜಾ, ಸಸ್ಯಶಾಸ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎನ್. ಅಮೃತೇಶ್, ಪ್ರಾಧ್ಯಾಪಕರಾದ ಪ್ರೊ.ಎಸ್. ಶಂಕರ ಭಟ್, ಪ್ರೊ.ಎಚ್. ರಾಜಕುವಾರ್ ಇತರರಿದ್ದರು.