ವೈಯಕ್ತಿಕ ವಿವರ ಸರಿಪಡಿಸಿಕೊಳ್ಳಿ

Untitled--00003
Published on

ಚಿತ್ರದುರ್ಗ:ಮಾಜಿ ಸೈನಿಕರು ಹಾಗೂ ಮಾಜಿ ಸೈನಿಕರ ಅವಲಂಬಿತರು ಸೇನಾ ಸೇವಾ ಪುಸ್ತಕದಲ್ಲಿರುವ ತಮ್ಮ ಹೆಸರು,ಪತಿ,ಪತ್ನಿ ಹಾಗೂ ಮಕ್ಕಳ ಹೆಸರುಗಳನ್ನು ಆಧಾರ್,ಎಸ್ಸೆಸ್ಸೆಲ್ಸಿ ಅಂಕ ಪಟ್ಟಿಗಳೊಂದಿಗೆ ಹೊಂದಾಣಿಕೆಯಾಗುವಂತೆ ಸರಿಪಡಿಸಿಕೊಳ್ಳಲು ಕೋರಿದೆ. ಸೇವಾ ಪುಸ್ತಕದಲ್ಲಿರುವ ಹೆಸರುಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದು,ಇದರಿಂದಾಗಿ ಪಿಂಚಣಿ ಹಾಗೂ ಇತರೆ ದೃಢೀಕರಣ ಪತ್ರಗಳು ಸಹಿತ ಇತರೆ ಸೌಲಭ್ಯಗಳನ್ನು ಪಡೆಯ ಲು ವಿಳಂಬವಾಗುತ್ತಿದೆ. ಆದ್ದರಿಂದ ಮೂಲ ದಾಖಲೆಗಳೊಂದಿಗೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಚೇರಿಗೆ ಭೇಟಿ ನೀ ಡಿ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08182-220925 ಗೆ ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net