ವೈಭವೋಪೇತ ಶೋಭಾಯಾತ್ರೆ: ಕಣ್ತುಂಬಿಕೊಂಡ ಜನ

shanthinikethana
Published on

ಮಡಿಕೇರಿ: ನಗರದ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ, ಗಣೇಶ ಮೂರ್ತಿಗಳ ವಿಸರ್ಜನೋತ್ಸವ ಶನಿವಾರ ರಾತ್ರಿ ವೈಭವೋಪೇತವಾಗಿ ಜರುಗಿತು.

ಪಡುವಣದಲ್ಲಿ ಸೂರ್ಯ ಅಸ್ತಮಿಸುತ್ತಿದ್ದಂತೆ ಆರಂಭವಾದ ಭವ್ಯ ಶೋಭಾಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಸಾಕ್ಷಿಯಾಯಿತು. ಚಲನವಲನಗಳನ್ನು ಒಳಗೊಂಡ ಅದ್ದೂರಿ ಮಂಪಟ ಸೂಜಿಗಲ್ಲಿನಂತೆ ಸೆಳೆಯಿತು.

ಲೋಕಕಲ್ಯಾಣಕ್ಕಾಗಿ ಮಹಾಗಣಪತಿಯಿಂದ ದೈತ್ಯ ಶತಮಹಿಷಿಯ ಸಂಹಾರ ಕಥಾಹಂದರವನ್ನು ಮಂಟಪದಲ್ಲಿ ಪ್ರದರ್ಶಿಸಲಾಯಿತು. ಪೌರಾಣಿಕ ಹಿನ್ನೆಲೆಯ ಈ ಪ್ರದರ್ಶನವು ಸೂಜಿಗಲ್ಲಿನಂತೆ ಸೆಳೆಯಿತು.

ಶಾಂತಿನಿಕೇತನ ಬಡಾವಣೆ, ಡಿಪೊ ಬಳಿ, ಜನರಲ್ ತಿಮಯ್ಯ ವೃತ್ತ, ನಗರ ಪೊಲೀಸ್ ಠಾಣೆ ಮುಂಭಾಗ, ಹಳೆ ಖಾಸಗಿ ಬಸ್‌ನಿಲ್ದಾಣ, ಇಂದಿರಾಗಾಂಧಿ ವೃತ್ತ (ಚೌಕಿ), ಚೌಡೇಶ್ವರಿ ದೇವಾಲಯ ಬಳಿ ಹೀಗೆ ಅನೇಕ ಕಡೆ ಪ್ರದರ್ಶನಗಳು ನಡೆದವು. ವಿವಿಧ ಹಾಡುಗಳಿಗೆ ಯುವಜನರು ಕುಣಿದು ಕುಪ್ಪಳಿಸಿದರು. ಕೇಸರಿ ಧ್ವಜವನ್ನಿಡಿದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಜ್ಜೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net