ವೈಭವದ ರಾಮನವಮಿ ಉತ್ಸವ ನಾಳೆ

4BK1
 ರಾಮನವಮಿ ಉತ್ಸವ ನಿಮಿತ್ತ ಬಸವಕಲ್ಯಾಣದಲ್ಲಿ ಗುರುವಾರ ಕರೆದಿದ್ದ ಶಾಂತಿಸಭೆಯಲ್ಲಿ ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ ಮಾತನಾಡಿದರು. ನಗರಸಭೆ ಅಧ್ಯಕ್ಷ ಎಂ.ಡಿ.ಸಗಿರೋದ್ದಿನ್, ತಹಸೀಲ್ದಾರ್ ದತ್ತಾತ್ರೇಯ ಗಾದಾ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಪಿಎಸ್‌ಐ ಸುರೇಶ ಹಜ್ಜರಗಿ ಇದ್ದರು.
Published on

ಬಸವಕಲ್ಯಾಣ: ಎಲ್ಲ ಸಮುದಾಯದವರ ಸಹಕಾರದೊಂದಿಗೆ ನಗರದಲ್ಲಿ ಭಾನುವಾರ ಶ್ರೀರಾಮ ನವಮಿ ಉತ್ಸವ ವೈಭವದಿಂದ ನಡೆಸಲು ಸಿಪಿಐ ಕಚೇರಿ ಆವರಣದಲ್ಲಿ ಗುರುವಾರ ಕರೆದಿದ್ದ ಶಾಂತಿಸಭೆಯಲ್ಲಿ ನಿರ್ಧರಿಸಲಾಯಿತು.

ಡಿವೈಎಸ್‌ಪಿ ಜೆ.ಎಸ್. ನ್ಯಾಮೇಗೌಡ ಮಾತನಾಡಿ, ರಾಮನವಮಿ ನಿಮಿತ್ತ ಶೋಭಾಯಾತ್ರೆಯನ್ನು ವೈಭವದ ಜತೆಗೆ ಶಾಂತಿಯುತ ನಡೆಯುವಂತೆ ನೋಡಿಕೊಳ್ಳಬೇಕು. ಎಲ್ಲ ಸಮುದಾಯದವರು ಪರಸ್ಪರ ಸಹಕಾರದಿಂದ ಆರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಸದಸ್ಯ ಗಫಾರ್ ಪೇಶಮಾಮ್ ಹಾಗೂ ಕೆಲ ಮುಸ್ಲಿಂ ಮುಖಂಡರು ಮಾತನಾಡಿ, ರಾಮನವಮಿ ಉತ್ಸವ ಹಾಗೂ ಶೋಭಾಯಾತ್ರೆ ವೈಭವದಿಂದ ನಡೆಸಬೇಕು. ಶೋಭಾಯಾತ್ರೆಯಲ್ಲಿ ಭಾಗವಹಿಸುವ ಮುಖಂಡರನ್ನು ಸನ್ಮಾನಿಸುವ ಮೂಲಕ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರಮುಖರಾದ ಸಂತೋಷ ಸಾಳುಂಕೆ, ಕೃಷ್ಣಾ ಗೋಣೆ, ಶಿವಕುಮಾರ ಬಿರಾದಾರ ಮಾತನಾಡಿ, ವೈಭವದ ಉತ್ಸವ ನಡೆಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.

ನಗರಸಭೆ ಅಧ್ಯಕ್ಷ ಎಂ.ಡಿ. ಸಗಿರೋದ್ದಿನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಮ್ಜದ್ ಅಲಿ ನವರಂಗ, ತಹಸೀಲ್ದಾರ್ ದತ್ತಾತ್ರೇಯ ಗಾದಾ, ನಗರಸಭೆ ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಪಿಎಸ್‌ಐಗಳಾದ ಅಂಬರೀಶ್ ವಾಗ್ಮೋಡೆ, ಪಿಎಸ್‌ಐ ಸುರೇಶ ಹಜ್ಜರಗಿ, ಪ್ರಮುಖರಾದ ಮನೋಹರ ಮೈಸೆ, ಕಿರಣ ಆರ್ಯ, ದತ್ತು ಭೇಂಡೆ, ದಿಗಂಬರ ಜಲ್ದೆ. ಶಿವರಾಜ ಮೆಂಗದೆ, ರಾಜು ಧನ್ನೂರ, ಜಗನ್ನಾಥ ಪಾಟೀಲ್, ಮನೋಜ ತಂಬುರ್ಚಿ, ರಾಜು ಕಾಲೇಕರ್, ಅಶೋಕ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net