

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣದ ಪಕ್ಕದ ವೈನ್ ಶಾಪ್‌ನ ಮೇಲಿನ ಶೀಟು ಒಡೆದು ಒಳ ನುಗ್ಗಿದ ಕಳ್ಳರು 75 ಸಾವಿರ ರೂ. ಕದ್ದೊಯ್ದಿದ್ದಾರೆ.
ಗುರುವಾರ ರಾತ್ರಿ ಎಂದಿನಂತೆ ಅಂಗಡಿ ಮುಚ್ಚಲಾಗಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಾರ್ ತೆರೆದಾಗ ಅಂಗಡಿ ಮೇಲಿನ ಶೀಟು ಒಡೆದು ಕಳ್ಳರು ಕಳ್ಳತನ ನಡೆಸಿರುವ ಬಗ್ಗೆ ತಿಳಿದು ಬಂದಿದೆ. ನಂತರ, ಪರಿಶೀಲಿಸಿದಾಗ 75 ಸಾವಿರ ರೂ. ಹಾಗೂ ಸಿಸಿ ಟಿವಿ ಡಿವಿಆರ್ ಕಳವಾಗಿದೆ . ಈ ಸಂಬಂಧ ಬಾರ್ ಮಾಲೀಕ ಚಿಕ್ಕಲಿಂಗೇಗೌಡ ಅವರು ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಹಾಗೂ ಶ್ವಾನ ದಳ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.