ವೈದ್ಯಾಧಿಕಾರಿ ಡಾ.ಶಾಮಸುಂದರ ಅಭಿಮತ, ಕೊಡಗು ವಿವಿಯಲ್ಲಿ ದಿನಾಚರಣೆ

22Kush03
Published on


ಕೊಡಗು: ಯೋಗದಿಂದ ದೇಹ ಮತ್ತು ಮನಸ್ಸನ್ನು ಹತೋಟಿಗೆ ತರಬಹುದು ಎಂದು ಡಾ.ಶಾಮಸುಂದರ ಹೇಳಿದರು.


ಕುಶಾಲನಗರದ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಆವರಣದಲ್ಲಿ ಯೋಗ ವಿಜ್ಞಾನ ವಿಭಾಗದಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದದಲ್ಲಿ ಮಾತನಾಡಿದರು.


ಯೋಗಾಭ್ಯಾಸ ವ್ಯಕ್ತಿಯನ್ನು ಕ್ರಿಯಾಶೀಲನನ್ನಾಗಿಸುತ್ತದೆ. ಜತೆಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಅಲ್ಲದೇ, ಗುಣಪಡಿಸಲಾಗದ ಕೆಲವೊಂದು ಕಾಯಿಲೆಗಳಿಗೆ ಯೋಗದಿಂದ ಪರಿಹಾರ ಸಾಧ್ಯವಿದೆ ಎಂದರು.


ಪ್ರಾಧ್ಯಾಪಕ ಡಾ.ರಾಜಕುಮಾರ್ ಎಸ್.ಮೇಟಿ ಮಾತನಾಡಿ, ಮಕ್ಕಳಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ. ದಿನನಿತ್ಯ ಆಸನಗಳನ್ನು ಮಾಡುವುದರಿಂದ ನೆಮ್ಮದಿಯ ಜೀವನ ನಡೆಸಬಹುದಾಗಿದೆ ಎಂದು ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ.ಜೆ.ಶಾಮಸುಂದರ ಮಾತನಾಡಿದರು. ಉಪನ್ಯಾಸಕ ಸುನೀಲ್, ವಿದ್ಯಾರ್ಥಿಗಳಾದ ವಿ.ಭೀಮರಾಯ, ವೆಂಕಟಾಚಲಪತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net