ವೈದ್ಯರಿಗೆ 1.27 ಕೋಟಿ ರೂ.ವಂಚನೆ

cyber crime
Published on

ಚಿತ್ರದುರ್ಗ: ಸೈಬರ್ ವಂಚಕರು ಚಿತ್ರದುರ್ಗ ವೈದ್ಯರೊಬ್ಬರೊಬ್ಬನ್ನು ಯಾಮಾರಿಸಿ ಅವರಿಗೆ 1.27 ಕೋಟಿ ರೂ. ವಂಚಿಸಿದ್ದಾರೆ. ಚಿತ್ರದುರ್ಗದ ಹಿರಿಯ ವೈದ್ಯ ಡಾ.ಶ್ರೀನಿವಾಸ್ ಶೆಟ್ಟಿ ಅವರು ವಂಚಕರ ಮಾತು ನಂಬಿ ಈ ಬೃಹತ್ ಮೊತ್ತವನ್ನು ಕಳೆದುಕೊಂಡಿದ್ದಾರೆ. ಟಿಆರ್‌ಎಐ ಮತ್ತು ಮುಂಬೈ ಪೊಲೀ ಸರೆಂದು ಹೇಳಿ ವೈದ್ಯರಿಗೆ ಕರೆ ಮಾಡಿದ್ದ ವಂಚಕರು.
ತಮ್ಮ ಖಾತೆಯಿಂದ ಮನಿಲ್ಯಾಂಡರಿಂಗ್ ಆಗಿದ್ದು,ತಮ್ಮ ಖಾತೆಯಲ್ಲಿರುವ ಹಣವನ್ನು ಆಡಿಟ್ ಮಾಡಬೇಕಿದೆ ಎಂದು ಹೇಳಿ ನಂಬಿಸಿ,1. 27 ಕೋಟಿ ರೂ.ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ವೈದ್ಯರಿಗೆ ವಂಚಕರು,ವಾಟ್ಸ್ ಆ್ಯಪ್ ಕಲ್ ಮತ್ತು ನಾರ್ಮಲ್ ಕಾಲ್ ಮಾಡಿ ದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಸಿಇಎನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net