

ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯರ ಅತ್ಯುತ್ತಮ ಸೇವೆ ಗುರುತಿಸಿ ಸ್ಮರಿಸುವುದು ನಮ್ಮೆಲರ ಆದ್ಯ ಕರ್ತವ್ಯವಾಗಿದೆ ಎಂದು ಎಸ್‌ಡಿಎಂ ವಿವಿ ಉಪಕುಲಪತಿ ಡಾ. ನಿರಂಜನ್ ಕುಮಾರ ಅಭಿಪ್ರಾಯಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ವೈದ್ಯರ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ರೋಗಿಗಳನ್ನು ಉತ್ತಮ ರೀತಿಯಲ್ಲಿ ಗುಣಪಡಿಸುವುದರೊಂದಿಗೆ ವಿದ್ಯಾರ್ಥಿಗಳ ನೆಚ್ಚಿನ ಪ್ರಾಧ್ಯಾಪಕರಾಗಿ ಹೊರಹೊಮ್ಮುತ್ತಾರೆ. ವೈದ್ಯರು ಕೆಲಸದ ಒತ್ತಡದೊಂದಿಗೆ ತಮ್ಮ ಕುಟುಂಬವನ್ನು ಸಮತೋಲನವಾಗಿ ನಿರ್ವಹಿಸಿಕೊಂಡು ಹೋಗಬೇಕು. ನಾವು ಸನ್ಮಾನಿಸಿದ ಮೂವರು ಹಿರಿಯ ವೈದ್ಯರು ಎಸ್‌ಡಿಎಂ ಆಸ್ಪತ್ರೆಗೆ ಅಸಾಮ್ಯಾನ ಸೇವೆ ನೀಡಿದ್ದಾರೆ ಎಂದರು.
ಎಸ್‌ಡಿಎಂ ರೋಗ ಲಕ್ಷಣ ಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಯು.ಎಸ್. ದಿನೇಶ, ಶರೀರ ರಚನಾ ಶಾಸ್ತ್ರ ವಿಭಾಗದ ಡಾ. ಸುಭಾಷ ದೇಶಪಾಂಡೆ ಹಾಗೂ ಅರವಳಿಕೆ ವಿಭಾಗದ ಡಾ. ಶ್ರೀರಂಗ ತೋರಗಲ್ಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್, ಸಹ ಉಪ ಕುಲಪತಿ ಡಾ. ಎಸ್.ಕೆ ಜೋಶಿ, ಜೀವಂಧರ್ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ್, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಡಾ. ಹೆಪ್ಸಿಬಾರಾಣಿ, ಡಾ. ವಿಜಯ ಕುಲಕರ್ಣಿ, ಡಾ. ಆದರ್ಶ ಹೆಗ್ಡೆ, ವಿವಿ ಅಧಿಕಾರಿಗಳು, ಮುಖ್ಯಸ್ಥರು, ಇತರರು ಇದ್ದರು.
ಪ್ರೊ. ಕ್ಲೆಮೆಂಟ್ ಚೆಲ್ಲಿ ಸ್ವಾಗತಿಸಿದರು. ಡಾ. ನಾಗಲಕ್ಷ್ಮೀ ನಿರೂಪಿಸಿದರು. ಡಾ. ಅಜಂತಾ ಜಿ.ಎಸ್. ವಂದಿಸಿದರು.