

ಹುಣಸಗಿ (ಗ್ರಾಮೀಣ): ಕಣ್ಣಿನ ಶಸ್ತç ಚಿಕಿತ್ಸೆ ಮಾಡಿಕೊಂಡ ಪ್ರತಿಯೊಬ್ಬರೂ ವೈದ್ಯರ ಸಲಹೆ ಯಾವುದೇ ಕಾರಣಕ್ಕು ಮರೆಯಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಹೇಳಿದರು.
ಪಟ್ಟಣ ಪಂಚಾಯಿತಿ ಆವರಣದಲ್ಲಿ ಬೆಂಗಳೂರಿನಿAದ ಕಣ್ಣಿನ ಶಸ್ತç ಚಿಕಿತ್ಸೆ ಮಾಡಿಸಿಕೊಂಡು ಪಟ್ಟಣಕ್ಕೆ ಆಗಮಿಸಿದವರನ್ನು ಸ್ವಾಗತಿಸಿ ಮಾತನಾಡಿದ ಅವರು, ಚಿಕಿತ್ಸೆಗೆ ಒಳಗಾದವರು ಕಡ್ಡಾಯವಾಗಿ ವೈದ್ಯರ ಸಲಹೆ ಪಾಲಿಸುವುದರಿಂದ ಬೇಗ ಚೇತರಿಸಿಕೊಳ್ಳಲು ಸಾಧ್ಯ ಎಂದರು.
ಇತ್ತೀಚೆಗೆ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ೪೫೦ ಜನರನ್ನು ಗುರುತಿಸಿ ಶಸ್ತç ಚಿಕಿತ್ಸೆಗಾಗಿ ಹಂತ-ಹAತವಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ. ಇನ್ನುಳಿದವರನ್ನು ಮತ್ತೆ ಕಳುಹಿಸಿಕೊಡಲಾಗುವುದು ಎಂದರು.
ಪಪA ಸದಸ್ಯ ಸಿದ್ರಾಮಪ್ಪ ಮುದಗಲ್ ಮಾತನಾಡಿ, ದಂಡಿನ್ ಕುಟುಂಬ ಸಮಾಜಮುಖಿ ಕೆಲಸ ಮಾಡುವ ಮೂಲಕ ಈ ಭಾಗದ ಬಡ ಜನರಿಗೆ ನೆರವಾಗಿದ್ದಾರೆ ಎಂದರು. ಚನ್ನಯ್ಯಸ್ವಾಮಿ ಹಿರೇಮಠ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಪ್ರಕಾಶ ಕಲಕೇರಿ, ಅಮರೇಶ, ಸದ್ದಾಂ ಬಿದರಿ, ಗೊಲ್ಲಾಳೇಶ ಗೋಗಿ ಇತರರಿದ್ದರು.