

ಚಿತ್ರದುರ್ಗ: ವೈದ್ಯರ ಸಲಹೆ ಇಲ್ಲದೆ ಆಂಟಿ ಬಯೋಟಿಕ್ ಔಷಧ ಸೇವಿಸಬಾರದೆಂದು ಎಸ್‌ಪಿ ಡಾ.ರಂಜಿತ್‌ಕುಮಾರ್ ಬಂಡಾರು ಹೇಳಿದರು. ನ ಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಎಸ್‌ಜೆಎಂ ಫಾರ್ಮಸಿ ಕಾಲೇಜು ಮತ್ತು ಐಎಂಎ ಸಹಯೋಗದಲ್ಲಿ ಬುಧವಾ ರ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಆಂಟಿ ಮೈಕ್ರೋಬಿಯಲ್ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿ,ಈಚಿನ ದಿನಗಳಲ್ಲಿ ವಿನಾ ಕಾರಣ ರೋಗ ನಿರೋಧಕ ಮಾತ್ರೆ,ಔಷಧ ಸೇವನೆ ಹವ್ಯಾಸ ಜನರಲ್ಲಿ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ವೈದ್ಯರ ಸಲಹೆಯೊಂದಿಗೆ ಔಷಧ,ಮಾತ್ರೆಗಳನ್ನು ಉಪಯೋಗಿಸ ಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವ ಕುಮಾರ ಸ್ವಾಮೀಜಿ ಮಾತನಾಡಿದರು
ನಗರದ ಪ್ರವಾಸಿಮಂದಿರದಿಂದ ಡಿಸಿ ಕಚೇರಿವರೆಗೆ ನಡೆದ ಜಾಥಾದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ವೀರ ವನಿತೆ ಒನಕೆ ಓಬವ್ವ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಜಾಗೃತಿ ಮೂಡಿಸಲಾಯಿತು. ಬಸವೇಶ್ವರ ಆಸ್ಪತ್ರೆ ಬೋಧಕರು,ಬೋಧಕೇತರ ಸಿಬ್ಬಂದಿ,ಐಎಂಎ ಪದಾಧಿಕಾರಿಗಳಿಗೆ ರೋಗ ನಿರೋಧಕ ಔಷಧ ದುರ್ಬಳಕೆ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಲಾಯಿತು.
ಬಸವೇಶ್ವರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರಾಜೇಶ್,ಡಾ.ನಾಗೇಂದ್ರಗೌಡ, ಡಾ. ಸುಧೀಂದ್ರ, ಡಾ.ಶುಭಾ,ಐಎಂಎ ಅಧ್ಯಕ್ಷ ಡಾ.ಪಾಲಾಕ್ಷಪ್ಪ, ಕಾರ‌್ಯದರ್ಶಿ ಡಾ.ಪ್ರಹ್ಲಾದ್,ಎಸ್‌ಜೆಎಂ ಫಾರ್ಮಸಿ ಕಾಲೇಜು ಪ್ರಾಂಶುಪಾಲ ನಾಗರಾಜ್, ಸತ್ಯನಾರಾಯಣ್ ಇತರರು ಇದ್ದ ರು.