

ರಾಯಚೂರು: ನಗರದ ಹೊರವಲಯದ ಸಾಥ್‌ಮೈಲ್ ಕ್ರಾಸ್ ಬಳಿ ಅ.31ರಂದು ಬೆಟ್ಟದೂರು ಆಸ್ಪತ್ರೆ ಮುಖ್ಯಸ್ಥ ಡಾ.ಜಯಪ್ರಕಾಶ ಪಾಟೀಲ್ ಮೇಲೆ ಗುಂಡು ಹಾರಿಸಿದ್ದ ಕಲಬುರಗಿ ಮೂಲದ ಇಬ್ಬರನ್ನು ಪೊಲೀಸರು ಸೋಮವಾರ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಥಳೀಯ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಕಚೇರಿಯಲ್ಲಿ ಬಳ್ಳಾರಿ ವಲಯ ಐಜಿಪಿ ಬಿ.ಎಸ್.ಲೋಕೇಶಕುಮಾರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಸಂಜೆ ಮಾತನಾಡಿ, ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ಮೂರು ತಂಡಗಳು ಪ್ರಕರಣವನ್ನು ಬೇಸುವಲ್ಲಿ ಯಶಸ್ವಿಯಾಗಿವೆ ಎಂದರು.
ಡಾ.ಜಯಪ್ರಕಾಶ ಪಾಟೀಲ್ ರಾಯಚೂರಿನಿಂದ ಮಾನ್ವಿಗೆ ಹೋಗುತ್ತಿರುವಾಗ ಬೈಕ್‌ನಲ್ಲಿ ಬಂದ ಇಬ್ಬರು ಕಾರ ಅಡ್ಡಗಟ್ಟಿ ಗುಂಡಿನ ದಾಳಿ ನಡೆಸಿದ್ದು, ಗುಂಡು ಕಾರಿನ ಬಾನೆಟ್‌ಗೆ ಬಿದ್ದಿತ್ತು. ಎರಡನೇ ಗುಂಡು ಹಾರದಿರುವುದರಿಂದ ಆರೋಪಿಗಳು ಪರಾರಿಯಾಗಿದ್ದರು.
ಆರೋಪಿಗಳ ಪತ್ತೆಗಾಗಿ ರಚಿಸಲಾಗಿದ್ದ ತಂಡ ಪ್ರಕರಣವನ್ನು ಬೇಸಿ ಕಲಬುರಗಿ ಮೂಲದ ಶರ್ುದ್ದೀನ್ ಮಿಸ್ಟರಿ, ಎಂ.ಡಿ.ಕಮರುದ್ದೀನ್‌ರಂದು ಬಂಸಿ ವಿಚಾರಣೆ ನಡೆಸಿದ್ದು, ವೈದ್ಯರಿಗೆ ಹಣ ನೀಡುವಂತೆ ಬೆದರಿಕೆ ಕರೆ ಮಾಡಿದ್ದು, ಹಣ ನೀಡದಿರುವುದರಿಂದ ಹೆದರಿಸುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, ದ್ವಿಚಕ್ರ ವಾಹನ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಅಕಾರಿಗಳು ಮತ್ತು ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡುವುದಾಗಿ ಐಜಿಪಿ ಬಿ.ಎಸ್.ಲೋಕೇಶಕುಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿ ಬಿ.ನಿಖಿಲ್, ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಆರ್.ಶಿವಕುಮಾರ, ಡಿವೈಎಸ್ಪಿ ಎಂ.ಜಿ.ಸತ್ಯನಾರಾಯಣ ರಾವ್, ಸಿಪಿಐಗಳಾದ ಪ್ರದೀಪ್ ತಳಕೇರಿ, ಗುರುರಾಜ ಕಟ್ಟಿಮನಿ, ನಾಗರಾಜ ಮೇಕಾ, ನಿಂಗಪ್ಪ, ಪಿಎಸ್‌ಐಗಳಾದ ಪ್ರಕಾಶರೆಡ್ಡಿ ಡಂಬಳ್, ಚಂದ್ರಪ್ಪ, ಸಣ್ಣ ವೀರೇಶ, ಟಿ.ಡಿ.ಮಂಜುನಾಥ, ಎಂ.ಸೌಮ್ಯ ಉಪಸ್ಥಿತರಿದ್ದರು.