

ತೆಲಸಂಗ: ಮಾನವಕುಲದ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವೈದ್ಯರ ಮಹತ್ವ ತಿಳಿಸುವ ಕೆಲಸವಾಗಬೇಕು ಎಂದು ಮುಖ್ಯ ಶಿಕ್ಷಕ ಗಪೂರ ಮುಲ್ಲಾ ಹೇಳಿದರು.
ಗ್ರಾಮದಲ್ಲಿ ಜ್ನ್ಯಾನ ಭಾರತಿ ಶಾಲಾ ವಿದ್ಯಾರ್ಥಿಗಳಿಂದ ವೈದ್ಯರ ದಿನಾಚರಣೆ ನಿಮಿತ್ತ ವೈದ್ಯರ ಪ್ರಾಮುಖ್ಯತೆ ಕುರಿತು ಕಿರುಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಕೋವಿಡ್-೧೯ ಸಾಂಕ್ರಾಮಿಕದಂತಹ ಕರಾಳ ದಿನಗಳನ್ನು ನಾವು ಕಂಡಿದ್ದೇವೆ. ವೈಯಕ್ತಿಕ ಸುರಕ್ಷತೆ ಬಗ್ಗೆ ಚಿಂತಿಸದೆ ಸೋಂಕಿತರ ಆರೈಕೆ ಮಾಡಿ, ಅಸಂಖ್ಯಾತ ಜೀವಗಳನ್ನು ಉಳಿಸಿದ್ದಾರೆ. ತಮ್ಮ ಕುಟುಂಬಗಳಿಂದ ದೂರ ಉಳಿದು, ದಣಿವರಿಯದೆ ಕೆಲಸ ಮಾಡಿದ ಅವರ ತ್ಯಾಗ ನಾವು ಎಂದಿಗೂ ಮರೆಯುವಂತಿಲ್ಲ ಎಂದರು.
ಇದೇ ವೇಳೆ ತೆಲಸಂಗ ಗ್ರಾಮದಲ್ಲಿ ಜ್ನ್ಯಾನ ಭಾರತಿ ಶಾಲಾ ವಿದ್ಯಾರ್ಥಿಗಳಿಂದ ವೈದ್ಯರ ಪ್ರಾಮುಖ್ಯತೆ ಕುರಿತು ಕಿರುಚಿತ್ರ ಪ್ರದರ್ಶನ ನಡೆಯಿತು.
ಶಿಕ್ಷಕರಾದ ದಾನಪ್ಪ ಜತ್ತಿ, ಶ್ರೀಶೈಲ ಜನಗೌಡ, ರಮೇಶ ಪೂಜಾರಿ, ದಾನಮ್ಮ ಬಿಜ್ಜರಗಿ, ಸಾವಿತ್ರಿ ಜತ್ತಿ, ಸವಿತಾ ವರದನ್ನವರ, ಅಶ್ವಿನಿ ಕುಮಠಳ್ಳಿ, ಸ್ನೇಹಾ ಕಲಾಲ ಉಪಸ್ಥಿತರಿದ್ದರು.