

ವೈದ್ಯರ ನಿರ್ಲಕ್ಷ್ಯ!
ಬಾಣಂತಿ ಜನನಾಂಗದಲ್ಲಿ ಬಟ್ಟೆ ಬಿಟ್ಟು ಹೋಲಿಗೆ ಹಾಕಿ ಯಡವಟ್ಟು
ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಒತ್ತಾಯ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ವೈದ್ಯರ ನಿರ್ಲಕ್ಷದಿಂದ ಗರ್ಭಿಣಿಯ ಹೆರಿಗೆ ಬಳಿಕ ಬಾಣಂತಿ ಜನನಾಂಗದಲ್ಲಿ ಟೈಂಪೂನ್ (ಬ್ಯಾಂಡೇಜ್ ಮಾಡಲು ಬಳಿಸುವ ವಸ್ತ್ರ) ಮಾಪ್ ಇಟ್ಟು ಹೋಲಿಗೆ ಹಾಕಿರುವ ಘಟನೆಯು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮುಗುಳಿ ಗ್ರಾಮದ ಗರ್ಭಿಣಿ ಶೃತಿ ಬಡಿಗೇರ ಫೆ.7 ರಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಹೆರಿಗೆ ಮಾಡಿದ ಬಾಣಂತಿ ಮಹಿಳೆಗೆ ರಕ್ತಸ್ರಾವ ಆಗುತ್ತಿತ್ತು. ರಕ್ತಸ್ರಾವ ತಡೆಯಲು ಒಳಗಡೆ ಹತ್ತಿ ಹಾಗು ಬಟ್ಟೆ ಬಿಟ್ಟು ಹೊಲಿಗೆ ಹಾಕಿ ಮನೆಗೆ ಕಳಿಸಿದ್ದಾರೆ.
ಕೆಲ ದಿನಗಳ ನಂತರ ಬಾಣಂತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ಆಕೆಯನ್ನು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಕ್ಕೇರಿ ವೈದ್ಯರು ತಪಾಸಣೆಯ ವೇಳೆ ಬಾಣಂತಿಯ ಜನನಾಂಗದಲ್ಲಿ ಬಟ್ಟೆಹಾಗೂ ಹತ್ತಿಯುಂಡೆ ಬಿಟ್ಟು ಹೊಲಿಗೆ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ಚಿಕ್ಕೋಡಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಬಾಣಂತಿಯ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ವೈದ್ಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.