ವೈದ್ಯಕೀಯ ರಂಗಕ್ಕೆ ಸಹಯೋಗ ಅಗತ್ಯ

13
Published on

ಮೈಸೂರು: ವೈದ್ಯಕೀಯ ಮತ್ತು ಇಂಜಿನಿಯರಿಂಗ್ ತಜ್ಞರ ನಡುವೆ ಪರಸ್ಪರ ಸಹಯೋಗ ಅಗತ್ಯ ಇದೆ ಎಂದು ಮುಂಬೈ ಐಐಟಿಯ ಪ್ರೊ.ಬಿ.ರವಿ ಹೇಳಿದರು.

ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ವೈದ್ಯಕೀಯ ಕಾರ್ಯಾಗಾರದಲ್ಲಿ ಮಾತನಾಡಿ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ನವೀನ, ವಿಶ್ವಾಸಾರ್ಹ ಮತ್ತು ಕೈಗೆಟಕುವ ವೈದ್ಯಕೀಯ ಸಾಧನ ಅಭಿವೃದ್ಧಿಪಡಿಸಬೇಕಾಗಿದೆ. ಅದಕ್ಕಾಗಿ ವೈದ್ಯಕೀಂು ಮತ್ತು ಇಂಜಿನಿಯರಿಂಗ್ ತಜ್ಞರ ಪರಸ್ಪರ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಔಷಧಾಲಯ, ಇಂಜಿನಿಯರಿಂಗ್, ಅರೆ ವೈದ್ಯಕೀಯ, ಜೀವ ವಿಜ್ಞಾನ, ರೊಬೊಟಿಕ್ಸ್‌ನಂತಹ ಹೊಸ ತಂತ್ರಜ್ಞಾನದೊಂದಿಗೆ ವೈದ್ಯಕೀಂು ಕ್ಷೇತ್ರವು ತ್ವರಿತ ಬದಲಾವಣೆಗಳಿಗೆ ಒಳಗಾಗುತ್ತಿದೆ. ಸಂವೇದಕಗಳು, ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರ ಸಹ ಬಳಸಿಕೊಳ್ಳಬೇಕಾಗಿದೆ ಎಂದರು.

ಪ್ರಾಧ್ಯಾಪಕ ಪ್ರೊ.ಪ್ರಮೋದ್ ಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net