

ಚಿತ್ತಾಪುರ: ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ಅವರು ಚಿತ್ತಾಪುರದ ಮಗ ಎನ್ನುವುದು ನಾವೆಲ್ಲ ಹೆಮ್ಮೆ ಪಡುವಂಥ ಸಂಗತಿ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ತಾಲೂಕು ಮಾಜಿ ಅಧ್ಯಕ್ಷ ಚಂದ್ರಶೇಖರ ಅವಂಟಿ ಹೇಳಿದರು.
ಅಕ್ಕಮಹಾದೇವಿ ಮಂದಿರದಲ್ಲಿ ವೀರಶೈವ ಮಹಾಸಭೆ ಹಾಗೂ ಡಾ.ಚಂದ್ರಪ್ಪ ರೇಷ್ಮಿ ಅವರ ಅಭಿಮಾನಿ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ನುಡಿನಮನ ಸಮಾರಂಭದಲ್ಲಿ ಮಾತನಾಡಿ, ಪರೋಪಕಾರಿ ಮನೋಭಾವದ ಡಾ.ರೇಷ್ಮಿ ಅವರು ದೇಶ-ವಿದೇಶದ ಗಣ್ಯರು ಸೇರಿ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ, ಹೊಸ ಬದುಕು ಕಲ್ಪಿಸಿದ್ದಾರೆ. ವಿಶ್ವದ ವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಣ್ಣಿಸಿದರು.
ಪುತ್ರ ಸಿಜೇಯ್ ರೇಷ್ಮಿ, ಶಿಕ್ಷಕ ವೀರೇಶ ಮಾಕಪ್ಪನೋರ, ವೀರಶೈವ ಮಹಾಸಭೆ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ಮುಖಂಡರಾದ ರೇವಣಸಿದ್ದಪ್ಪ ರೋಣದ, ಶಾಂತಕುಮಾರ ಮಳಖೇಡ ಮಾತನಾಡಿದರು.
ಪ್ರಮುಖರಾದ ಲಿಂಗಾರೆಡ್ಡಿಗೌಡ ಭಾಸರೆಡ್ಡಿ, ಪ್ರಭುರಾಜ ರೇಷ್ಮಿ, ಡಾ.ವಿಲಾಸಬಾಬು ಕೋರವಾರ, ಸೋಮಶೇಖರ ಪಾಟೀಲ್ ಬೆಳಗುಂಪಾ, ಡಾ. ಚಂದ್ರಶೇಖರ ಕಾಂತಾ, ರವೀಂದ್ರ ಸಜ್ಜನಶೆಟ್ಟಿ, ಸುಶೀಲಾಬಾಯಿ ರೇಷ್ಮಿ, ಶಿವಶರಣಪ್ಪ, ಸರಸ್ವತಿ, ನಾಗಮ್ಮ, ಸಿದ್ದು, ಶಿಲ್ಪಾ ಗಡಾದ, ಆರೂಷ್ ಗಡಾದ, ಮಲ್ಲರೆಡ್ಡಿ ಗೋಪಶೇನ್, ಚಂದ್ರಶೇಖರ ತೆಂಗಳಿ, ಓಂಕಾರೇಶ್ವರ, ವೆಂಕಟಮ್ಮ ಪಾಲಪ, ಆನಂದ ಪಾಟೀಲ್ ನರಬೋಳ, ಬಸವರಾಜ ಹೂಗಾರ ಇತರರಿದ್ದರು. ವೀರಭದ್ರಪ್ಪ ಹುಮನಾಬಾದ್ ಪ್ರಾಸ್ತಾವಿಕ ಮಾತನಾಡಿದರು. ಸಂಗಮೇಶ ರೋಣದ ನಿರೂಪಣೆ ಮಾಡಿದರು. ಸಂತೋಷ ಹಾವೇರಿ ವಂದಿಸಿದರು.