ವೈದ್ಯಕೀಯ ಕಾಲೇಜುಗಳ ಪದವಿ ಪ್ರದಾನ ನಾಳೆ

22222222222
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಬಿ.ಡಿ. ಜತ್ತಿ ಹೋಮಿಯೋಪಥಿಕ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಸಿ.ಬಿ. ಗುತ್ತಲ ಆರ್ಯುವೇದಿಕ್ ಕಾಲೇಜು ಮತ್ತು ಆಸ್ಪತ್ರೆಯ ಪದವಿ ಪ್ರಧಾನ ಸಮಾರಂಭವನ್ನು ಡಿ. ೧೦ರಂದು ಬೆಳಗ್ಗೆ ೧೦ ಗಂಟೆಗೆ ಇಲ್ಲಿನ ಕೃಷಿ ವಿಶ್ವವಿದ್ಯಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈರೇಶ ಅಂಚಟಗೇರಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಪದವಿ ಪ್ರದಾನ ಮಾಡುವರು. ರ‍್ಯಾಂಕ್ ವಿಜೇತ ೫೦ ವಿದ್ಯಾರ್ಥಿಗಳು ಸೇರಿ ೧೩೫ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮÁಡಲಾಗುವುದು ಎಂದರು.
ಸಭಾದ ಸಲಹಾ ಸಮಿತಿ ಸದಸ್ಯ ಅರುಣ ಜೋಶಿ, ವಿಶೇಷ ಕಾರ್ಯದರ್ಶಿ ಎಸ್ .ಬಿ. ಹಿಂಚಿಗೇರಿ, ಕಾರ್ಯದರ್ಶಿ ಎಸ್. ರಾಧಾಕೃಷ್ಣನ್, ಪ್ರಾಚಾರ್ಯರಾದ ಡಾ. ಎಸ್.ಟಿ. ಹೊಂಬಳ, ಡಾ. ವೈಷ್ಣವಿ ಸತೀಶ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net