ವೈದ್ಯಕೀಯ ಆವಿಷ್ಕಾರಗಳಿಂದ ಕ್ಯಾನ್ಸರ್ ನಿವಾರಣೆ

4Jaggu8
ಬೆಳಗಾವಿ ನಗರದ ಬೆಲಗಾಮ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ತಡೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ಯಾನ್ಸರ್ ರೋಗಿಗಳ ಸಮಾಗಮ ಹಾಗೂ ಜಾಗೃತಿ ಕಾರ್ಯಾಗಾರದಲ್ಲಿ ಕ್ಯಾನ್ಸರ್‌ನಿಂದ ಗುಣಮುಖರಾದವರು ಅನುಭವ ಹಂಚಿಕೊಂಡರು. ಡಾ.ಇಮ್ತಿಯಾಜ್ ಅಹ್ಮದ್, ಡಾ.ರಾಜಶೇಖರ ಸೋಮನಟ್ಟಿ, ಡಾ.ಕುಮಾರ ವಿಂಚುರಕರ, ಡಾ.ಮಹೇಶ ಕಲ್ಲೋಳ್ಳಿ, ಡಾ.ಸಂತೋಷ ಮಠಪತಿ, ಡಾ.ರೋಹನ ಭಿಸೆ, ಡಾ.ಸಪ್ನಾ ಇತರರು ಇದ್ದರು.
Published on

ಬೆಳಗಾವಿ: ವೈದ್ಯಕೀಯ ತಂತ್ರಜ್ಞಾನದಲ್ಲಾದ ಬದಲಾವಣೆ ಮತ್ತು ಆವಿಷ್ಕಾ ರಗಳು ಕ್ಯಾನ್ಸರ್ ರೋಗಿಗಳ ಜೀವ ಉಳಿಸುವಲ್ಲಿ ಸಹಕಾರಿಯಾಗಿವೆ ಎಂದು ಬೆಲಗಾಮ್ ಕ್ಯಾನ್ಸರ್ ಆಸ್ಪತ್ರೆಯ ಆಡಳಿತಾಧಿಕಾರಿ
ಡಾ. ಇಮ್ತಿಯಾಜ್ ಅಹ್ಮದ್ ಹೇಳಿದರು.

ನಗರದ ಬೆಲಗಾಮ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿಶ್ವ ಕ್ಯಾನ್ಸರ್ ತಡೆ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕ್ಯಾನ್ಸರ್ ರೋಗಿಗಳ ಸಮಾಗಮ ಹಾಗೂ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ಯಾನ್ಸರ್ ರೋಗಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ವಿನೂತನ ತಂತ್ರಜ್ಞಾನಗಳ ಸಹಾಯದಿಂದ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದರು.

ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ರಾಜಶೇಖರ ಸೋಮನಟ್ಟಿ ಮಾತನಾಡಿ, ಅತ್ಯಾಧುನಿಕ ತಂತ್ರಜ್ಞಾನದಿಂದ ಇಂದು ಸಕಲ ರೋಗಗಳಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತಿದೆ. ಆದರೆ, ಕ್ಯಾನ್ಸರ್ ಎಂದೊಡನೆ ರೋಗಿಗಳು ಬೆಚ್ಚಿ ಬೀಳುತ್ತಾರೆ. ಅವರಲ್ಲಿರುವ ಭಯ ಹೋಗಲಾಡಿಸುವ ಚಿಕಿತ್ಸಾ ವಿಧಾನ ಅಳವಡಿಸಿಕೊಳ್ಳಬೇಕಾಗಿದೆ. ಸಾಮಾನ್ಯರಂತೆ ಜೀವನ ನಡೆಸುತ್ತೇವೆ ಎಂಬ ಆಶಾಭಾವನೆ ಅವರಲ್ಲಿ ಮೂಡಬೇಕು. ಅದರಂತೆ ರೋಗಿಗಳೂ ಕೂಡ ನಿಗದಿತ ಸಮಯಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದರು. ಕ್ಯಾನ್ಸರ್‌ನಿಂದ ಗುಣಮುಖರಾದವರನ್ನು ಸತ್ಕರಿಸಲಾಯಿತು.ರೋಗಿಗಗಳು ತಮ್ಮ ಅನುಭವ ವ್ಯಕ್ತಪಡಿಸಿದರು. ಕ್ಯಾನ್ಸರ್ ತಜ್ಞ ವೈದ್ಯ ಡಾ.ಕುಮಾರ ವಿಂಚುರಕರ, ಡಾ.ಮಹೇಶ ಕಲ್ಲೋಳ್ಳಿ, ಡಾ.ಸಂತೋಷ ಮಠಪತಿ, ಡಾ.ರೋಹನ ಭಿಸೆ, ಡಾ.ಸಪ್ನಾ, ಡಾ. ರಾಘವೇಂದ್ರ, ಶಿಲ್ಪಾ ವಾಲಿ ಇತರರಿದ್ದರು. ಛಾಯಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net