

ಕಲಬುರಗಿ: ವೈದ್ಯರಾಗಿ ತೆಗೆದುಕೊಂಡ ಪ್ರತಿಜ್ನೆ ವಿಧಿಯಲ್ಲಿನ ಪ್ರತಿಯೊಂದು ಅಕ್ಷರವನ್ನು ವೃತ್ತಿಯಲ್ಲಿ ತಪ್ಪದೇ ಪಾಲಿಸಬೇಕು. ವೃತ್ತಿಪರ ಶಿಕ್ಷಣ ಪಡೆದವರಿಗೆ ಸಮಾಜದಲ್ಲಿ ಬದಲಾವಣೆ ತರುವ ಅವಕಾಶ ಎದುರಾಗುತ್ತವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಬಿಎಲ್‌ಡಿಇ ಡೀಮ್ಡ್ ವಿವಿ ಕುಲಪತಿ ಡಾ.ಆರ್.ಎಸ್.ಮುಧೋಳ ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿAಗ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಎಸ್.ನಿಜಲಿಂಗಪ್ಪ ದಂತ ವೈದ್ಯಕೀಯ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿ, ವೈದ್ಯರಾದವರು ಉತ್ತಮ ವರ್ತನೆ, ಮಾನವೀಯತೆ, ಉತ್ತಮ ಕೌಶಲ ಮತ್ತು ಸಂವಹನ, ವಿನಮ್ರತೆಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎಲ್ಲರೂ ಗೌರವ ನೀಡುತ್ತಾರೆ ಎಂದು ಹೇಳಿದರು.
ವೈದ್ಯ ಪವಿತ್ರ ವೃತ್ತಿ. ಅಡ್ಡ ಮಾರ್ಗದಲ್ಲಿ ಹೋದರೆ ವೃತ್ತಿಯ ಘನತೆಗೆ ಧಕ್ಕೆ ಬರುತ್ತದೆ. ವೈದ್ಯರು ಪ್ರಾಮಾಣಿಕರಾಗಿರಬೇಕು. ಕೆಲ ಮುಗ್ಧ ರೋಗಿಗಳೂ ಚಿಕಿತ್ಸೆಗೆ ಬರುತ್ತಾರೆ. ಅವರೊಂದಿಗೆ ಚೆನ್ನಾಗಿ ವರ್ತಿಸಿ, ಸರಿಯಾಗಿ ಚಿಕಿತ್ಸೆ ನೀಡಬೇಕು. ರೋಗಿಗಳ ಬಗ್ಗೆ ಕಾಳಜಿಯ ಜತೆಗೆ ಬದ್ಧತೆಯೂ ಇರಿಸಿಕೊಂಡರೆ ಒಳ್ಳೆಯ ವೈದ್ಯರಾಗುತ್ತೀರಿ ಎಂದು ಸಲಹೆ ನೀಡಿದರು.
ಪದವಿ ಮುಗಿಸಿದ ನಂತರ ಸ್ನಾತಕೋತ್ತರ, ಸಂಶೋಧನೆ, ವೃತ್ತಿಯಲ್ಲೂ ಹಲವು ದಾರಿಯಿವೆ. ಯಾವುದೇ ಮಾರ್ಗ ಆಯ್ದುಕೊಂಡರೂ ಪ್ರಾಮಾಣಿಕವಾಗಿರಬೇಕು. ಭಾರತೀಯ ಪದವೀಧರರಲ್ಲಿ ಉತ್ತಮ ಕೌಶಲ ಇರುವುದರಿಂದ ಮಧ್ಯಪ್ರಾಚ್ಯ ಮತ್ತು ಐರೋಪ್ಯ ರಾಷ್ಟçಗಳಲ್ಲಿ ದಂತ ವೈದ್ಯರಿಗೆ ಬೇಡಿಕೆ ಇದೆ. ದೇಶದಲ್ಲಿ ೭೦೦ ವೈದ್ಯಕೀಯ ಕಾಲೇಜು, ೪೦೦ ದಂತ ವೈದ್ಯಕೀಯ ಕಾಲೇಜುಗಳಿವೆ. ೧ ಲP್ಷÀ ವೈದ್ಯಕೀಯ ಸೀಟ್‌ಗಳಲ್ಲಿ ಸುಮಾರು ೩೦ ಸಾವಿರ ಸೀಟ್‌ಗಳು ದಂತ ವೈದ್ಯಕೀಯಕ್ಕೆ ಮೀಸಲಿವೆ. ಇದು ದಂತ ವೈದ್ಯಕೀಯಕ್ಕೆ ಇರುವ ಬೇಡಿಕೆ ಸೂಚಿಸುತ್ತದೆ ಎಂದರು.
ಸAಸ್ಥೆ ಅಧ್ಯP್ಷÀ, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿ, ರೋಗಿಗಳಲ್ಲಿ ವೈದ್ಯರು ಭರವಸೆಯ ಭಾವನೆ ಮೂಡಿಸಬೇಕು. ಹಸನ್ಮುಖದೊಂದಿಗೆ ರೋಗಿಯನ್ನು ಸ್ವಾಗತಿಸಿ, ವಿಶ್ವಾಸವನ್ನು ಮೂಡಿಸಿ, ನಿಮ್ಮ ಬಳಿಗೆ ಬಂದರೆ ನೋವೆಲ್ಲ ವಾಸಿ ಮಾಡುತ್ತಾರೆ ಎಂಬ ಭಾವ ಬರುವಂತೆ ಇರಬೇಕು ಎಂದರು.
ಎಚ್‌ಕೆಇ ಸದಸ್ಯರಾದ ಡಾ.ಕಿರಣ ದೇಶಮುಖ, ಡಾ.ಅನಿಲ್‌ಕುಮಾರ ಪಟ್ಟಣ, ನಿಶಾಂತ ಜಿ.ಯಾಲಿ, ಡಾ.ಶರಣಬಸಪ್ಪ ಆರ್.ಹರವಾಳ, ಅರುಣಕುಮಾರ ಎಂ.ಪಾಟೀಲ್, ಪ್ರಾಚಾರ್ಯರಾದ ಡಾ.ಜಯಶ್ರೀ ಮುz್ದÁ, ಉಪ ಪ್ರಾಚಾರ್ಯ ಡಾ.ವೀರೇಂದ್ರ ಪಾಟೀಲ್, ಡಾ.ಶಿವಪ್ರಸಾದ್ ತೋರಣ, ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ ದೇಶಮುಖ ಇತರರಿದ್ದರು.