ವೈದ್ಯ ಜಯಪ್ರಕಾಶ ಮೇಲೆ ಗುಂಡಿನ ದಾಳಿ

31-08-Shiva-4
ರಾಯಚೂರಿನ ಸಾತ್‌ಮೈಲ್ ಕ್ರಾಸ್ ಬಳಿ ಗುರುವಾರ ಗುಂಡಿನ ದಾಳಿಗೆ ಒಳಗಾದ ಬೆಟ್ಟದೂರು ಆಸ್ಪತ್ರೆ ಮುಖ್ಯಸ್ಥ ಡಾ.ಜಯಪ್ರಕಾಶ ಪಾಟೀಲ್
Published on

ರಾಯಚೂರು: ಸ್ಥಳೀಯ ಬೆಟ್ಟದೂರು ಆಸ್ಪತ್ರೆಯ ಮುಖ್ಯಸ್ಥ ಡಾ.ಜಯಪ್ರಕಾಶ ಪಾಟೀಲ್ ಬೆಟ್ಟದೂರು ಮೇಲೆ ಗುರುವಾರ ಮಧ್ಯಾಹ್ನ ಗುಂಡಿನ ದಾಳಿ ನಡೆಸಿ ಕೊಲೆಗೆ ಪ್ರಯತ್ನಿಸಿದ್ದು, ವೈದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಸಾಥ್‌ಮೈಲ್ ಹತ್ತಿರ ಘಟನೆ ಜರುಗಿದ್ದು, ರಾಯಚೂರಿನಿಂದ ಮಾನ್ವಿಗೆ ಡಾ.ಜಯಪ್ರಕಾಶ ಪಾಟೀಲ್ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗುಂಡು ಕಾರಿನ ಬಾನೆಟ್‌ಗೆ ಬಿದ್ದಿದ್ದು, ಎರಡನೇ ಗುಂಡು ಹಾರಿಸಲು ಪ್ರಯತ್ನಿಸಿದ್ದರೂ ಗುಂಡು ಹಾರದಿರುವ ಕಾರಣ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ರಾಯಚೂರಿನಿಂದ ಹಿಂಬಾಲಿಸಿ ಬಂದಿರುವ ಶಂಕೆಯಿದ್ದು, ಸಾಥ್‌ಮೈಲ್ ಕ್ರಾಸ್ ಬಳಿ ಬ್ಯಾರಿಕೇಡ್ ಹಾಕಿದ್ದರಿಂದ ಕಾರ್ ನಿಧನವಾದಾಗ ಗುಂಡು ಹಾರಿಸಿದ್ದಾರೆ. ಬೈಕ್‌ನಲ್ಲಿದ್ದವರು ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡಿದ್ದು, ಎರಡನೇ ಗುಂಡು ಹಾರದಿದ್ದಾಗ ಜನರನ್ನು ಪರಾರಿಯಾಗಿದ್ದಾರೆ.
ಕಳೆದ ಮೂರು ತಿಂಗಳಿಂದ ಮಿಡಿ ಭಾಯ್ ಹೆಸರಿನಲ್ಲಿ ಡಾ.ಜಯಪ್ರಕಾಶ ಪಾಟೀಲ್‌ಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯಿಡಲಾಗಿತ್ತಿತ್ತು. ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದರು. ಈ ಕುರಿತು ಪೊಲೀಸರಿಗೂ ದೂರು ನೀಡಲಾಗಿತ್ತು. ಅದೇ ದುಷ್ಕರ್ಮಿಗಳು ಇಂದು ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಎಸ್ಪಿ ಬಿ.ನಿಖಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net