ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿ

28 KAMPLI 03
Published on

ಕಂಪ್ಲಿ: ಕಸಮುಕ್ತ ಪಟ್ಟಣಕ್ಕಾಗಿ ಜನತೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ಹೇಳಿದರು.

ಪುರಸಭೆ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್-2 ಅಭಿಯಾನದಡಿ ಕಸ ವಿಲೇವಾರಿ ಕುರಿತ ಮಾಹಿತಿ, ಶಿಕ್ಷಣ ಮತ್ತು ಸಂವಹನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಸವನ್ನು ರಸ್ತೆ ಬದಿ, ತಿಪ್ಪೆಗೆ ಎಸೆಯದೆ ಕಸ ಸಾಗಣೆ ವಾಹನದಲ್ಲಿ ಹಾಕಬೇಕು. ಮನೆಯಲ್ಲಿ ಹಸಿ ಕಸ, ಒಣ ಕಸ, ಇ-ತ್ಯಾಜ್ಯ ಮತ್ತು ಅಪಾಯಕಾರಿ ಕಸ ಪ್ರತ್ಯೇಕಿಸಿ ಕಸ ಸಾಗಣೆ ವಾಹನದಲ್ಲಿ ಹಾಕಬೇಕು. ಪಟ್ಟಣದ ಸೌಂದರ್ಯೀಕರಣದೊಂದಿಗೆ, ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವೈಜ್ಞಾನಿಕ ಮಾದರಿಯ ಕಸ ವಿಲೇವಾರಿ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಸ್ವಚ್ಛ ಭಾರತ ಮಿಷನ್-2 ಸಮುದಾಯ ಸಂಚಾಲಕಿ ಜಾನಕಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಉಪಯುಕ್ತ ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಗಿಡ ಬೆಳೆಸಲು ಹಾಗೂ ಇತರ ನಾನಾ ಕಾರ್ಯಗಳಿಗೆ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ಬಳಕೆ ಮಾಡುವುದನ್ನು ರೂಢಿ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

ಪರಿಸರ ಅಭಿಯಂತರ ಶರಣಪ್ಪ, ಆರೋಗ್ಯ ನಿರೀಕ್ಷಕರಾದ ಪ್ರಕಾಶಬಾಬು, ಜೀವನ್ ಸ್ವಾತಿ, ಸಂಚಾಲಕಿಯರಾದ ಗೌಡರ ನಾಗರತ್ನ, ಎಚ್.ಎಂ.ಮೇಘನಾ, ತಿಮ್ಮಮ್ಮ, ಭೂಮಿಕಾ, ಸಂಪನ್ಮೂಲ ವ್ಯಕ್ತಿಗಳಾದ ರೇಣುಕಾ ಸುರಪುರ, ರೋಜಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net