

ಬೈಲಹೊಂಗಲ: ವೈಜ್ಞಾನಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಮೂಢನಂಬಿಕೆ ವಿರಾಜಮಾನವಾಗಿ ರಾರಾಜಿಸುತ್ತಿವೆ. ಅಮಾಯಕರು ಮೌಢ್ಯಕ್ಕೆ ಬಲಿಯಾಗುತ್ತಿದ್ದಾರೆ ಎಂದು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಮಹಾಂತಶೆಟ್ಟಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಘಟಕದಿಂದ ಆಯೋಜಿಸಿದ್ದ ಮೌಢ್ಯ ನಿವಾರಣೆಗಾಗಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾವಂತರು ಜಾಗತಿ ಮೂಡಿಸಬೇಕು, ಮೌಢ್ಯದ ವಿರುದ್ಧ 12ನೇ ಶತಮಾನದಲ್ಲೇ ಬಸವಣ್ಣನವರು ಜಾಗತಿ ಮೂಡಿಸಿದ್ದಾರೆ. ಅನವಶ್ಯಕವಾಗಿ ಸಮಯ, ಹಣ ಹಾಳು ಮಾಡಿಕೊಳ್ಳಬಾರದು ಎಂದರು.
ಯರಗಟ್ಟಿಯ ನಿವತ್ತ ಮುಖ್ಯಾಧ್ಯಾಪಕ ರಂಗಪ್ಪ ಜೂಗನ್ನವರ ಮಾತನಾಡಿ, ವಿದ್ಯಾವಂತರಿದ್ದರೂ ಮೌಢ್ಯ ಹೆಚ್ಚಾಗುತ್ತಿರುವುದು ದುರಂತ ಎಂದರು.
ಪ್ರಾಚಾರ್ಯ ಬಸವರಾಜ ಕುರಿ, ತಾಲೂಕು ಘಟಕಾಧ್ಯಕ್ಷ ಬಸವಣ್ಣ ಅಡಕಿ ಮಾತನಾಡಿದರು. ಅಶೋಕ ವಾಲಿ, ಸಂಗಮೇಶ ಖನ್ನಿನಾಯ್ಕರ, ಹಣಮಂತ ಲಂಗೋಟಿ, ಡಾ.ಕುಮಾರ ದಾಸರ, ಚಂದ್ರಶೇಖರ ಕೊಪ್ಪದ, ಯೋಗಗುರು ಸಂಗಮೇಶ ಸವದತ್ತಿಮಠ, ವಿಜಯ ಪತ್ತಾರ, ದಯಾನಂದ ಗೆಜ್ಜಿ, ಮಲ್ಲೇಶಪ್ಪ ಯರಗುದ್ದಿ, ಸೋಮನಗೌಡ ಮಲಗೌಡರ ಅತಿಥಿಗಳಾಗಿ ಆಗಮಿಸಿದ್ದರು. ಬಸವರಾಜ ಕೊಳವಿ ಸ್ವಾಗತಿಸಿದರು. ಎಚ್.ಆರ್.ಪಾಟೀಲ ವಿದ್ಯಾರ್ಥಿಗಳಿಗೆ ಪ್ರತಿಜ್ಞಾನಿಧಿ ಬೋಧಿಸಿದರು. ಸೌಮ್ಯಾ ಬಡ್ಡಿಮನಿ ಪ್ರಾರ್ಥಿಸಿದರು. ಸೌಜನ್ಯ ಹಡಪದ ನಿರೂಪಿಸಿದರು. ಗಿರೀಶ ಹರಕುಣಿ ವಂದಿಸಿದರು.