

ಬೆಲಹೊಂಗಲ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಅನುಭವದೊಂದಿಗಿನ ಕಲಿಕೆಗೆ ಮಾದರಿಗಳ ವಸ್ತು ಪ್ರದರ್ಶನ ಸಹಕಾರಿ ಎಂದು ಪ್ರಾಚಾರ್ಯ ಹನಮೇಶ ದುಡ್ಯಾಳ ಹೇಳಿದರು.
ಪಟ್ಟಣದ ಕಲ್ಪವೃ ಮಾದರಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಿಕಾ ವಿಷಯಾಧಾರಿತ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ವಸ್ತು ಪ್ರದರ್ಶನ ವೇದಿಕೆ ನಿರ್ಮಿಸುತ್ತದೆ ಎಂದರು.
ಆಧುನಿಕ ಕೃಷಿ ಪದ್ಧತಿ, ಬಯೋಗ್ಯಾಸ್ ಉಪಯೋಗದ ವಿಧಾನಗಳು, ಬೆಲಹೊಂಗಲ ಪಟ್ಟಣದ ಇತಿಹಾಸಕ್ಕೆ ಸಂಬಂಧಿಸಿದ ಸ್ಮಾರಕಗಳು, ಜನಪದ ಸೊಗಡು, ಭಾರತೀಯ ಸಂಸತಿ, ಹಬ್ಬಗಳು, ಪರಿಸರ ವಿಜ್ಞಾನ, ಮಾಹಿತಿ ತಂತ್ರಜ್ಞಾನ ವಿಷಯಗಳ ಆಧಾರಿತ ಮಾದರಿಗಳ ಜ್ಞಾನವನ್ನು ಮಕ್ಕಳು ಪಡೆದರು. ಮಕ್ಕಳು ಹಾಗೂ ಪಾಲಕರು ಉತ್ಸಾಹದಿಂದ ಪಾಲ್ಗೊಂಡಿದ್ದರು. 210 ಮಾದರಿಗಳು ಪ್ರದರ್ಶನಗೊಂಡವು.
ಮುರಗೋಡ ಸಿಪಿಐ ಐ.ಎಂ.ಮಠಪತಿ, ಆಡಳಿತ ಮಂಡಳಿಯ ಸದಸ್ಯ ದಿನಕರ ಜೋಶಿ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ, ಸಂಯೋಜಕಿಯರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.