ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣಕ್ಕೆ ಸಲಹೆ

CTD27 MHAIL COLAGE--03
Published on

ಚಿತ್ರದುರ್ಗ: ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶಿಕ್ಷಣ ಕಲಿಯಬೇಕಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎಚ್. ಗುಡ್ಡದೇಶ್ವರಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ವಿಜ್ಞಾನ,ವಿಚಾರಗಳು ಕಲಿಕೆಯ ಬುನಾದಿ ಆಗಿರಬೇಕು.
ಶಿಕ್ಷಣದ ಅವಧಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಗಮನ ನೀಡಬೇಕು. ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ,ಕಲಿಕೆಗೆ ತೊಂದರೆಯಾಗದಂತೆ ಕಾಲೇಜಿನಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲು ಗಮನ ಹರಿಸಲಾಗುತ್ತಿದೆ ಎಂದ ಅವರು, ಪ್ರವೇಶ,ಕಿರುಪರೀಕ್ಷೆ ಮತ್ತು ಫಲಿತಾಂಶ,ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಅಭಿವಿನ್ಯಾಸ ಕಾರ್ಯಕ್ರಮದ ಸಂಚಾಲಕ ಪ್ರೊ.ಬಿ.ಮಂಜುನಾಥ ಮಾತನಾಡಿ,ವಿದ್ಯಾರ್ಥಿಗಳಿಗೆ ಶಿಸ್ತು ಮುಖ್ಯ. ಈ ಹಿನ್ನೆಲೆಯಲ್ಲಿ ಅಭಿವಿನ್ಯಾಸ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದರು.
ಪ್ರಾಧ್ಯಾಪಕರಾದ ಡಾ.ಸಿ.ಚನ್ನಕೇಶವ,ಡಾ.ಶಿವಣ್ಣ,ಡಾ.ಸಿದ್ದಪ್ಪ,ಪ್ರೊ.ಎಚ್.ಶಕುಂತಲಾ,ಪ್ರೊ.ಆರ್.ಲೀಲಾವತಿ,ಡಾ.ಪಿ.ಎನ್.ಮಧು ಸೂದನ,ಎಂ.ಗಿರೀಶ್,ಕ್ರೀಡಾ ಸಂಚಾಲಕ ಆರ್.ಶಿವಪ್ರಸಾದ್,ಗ್ರಂಥಪಾಲಕ ಬಿ.ಎಚ್.ಕುಮಾರಸ್ವಾಮಿ,ಕೆ.ಎನ್.ಬಸಣ್ಣಗೌಡ,ಸುಜಲಾ, ಎಸ್.ಕೆ.ಶ್ರೀಲಕ್ಷ್ಮೀ,ಡಿ.ನಂದಿನಿ ಇದ್ದರು.
(ಸಿಟಿಡಿ 27 ಮಹಿಳಾ ಕಾಲೇಜು)
ಚಿತ್ರದುರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ‌್ಯ ಡಾ.ಎಚ್.ಗುಡ್ಡದೇಶ್ವರಪ್ಪ ಉದ್ಘಾಟಿಸಿದರು.ಪ್ರೊ.ಬಿ.ಮಂಜುನಾಥ,ಡಾ.ಸಿ.ಚನ್ನಕೇಶವ,ಡಾ.ಶಿವಣ್ಣ,ಡಾ.ಸಿದ್ದಪ್ಪ,ಪ್ರೊ.ಎಚ್.ಶಕುಂತಲಾ,ಪ್ರೊ.ಆರ್.ಲೀಲಾವತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net