ವೈಜ್ಞಾನಿಕ, ತಾಂತ್ರಿಕ ತಳಹದಿ ಮೇಲಿದೆ ಭವಿಷ್ಯ

KDR science
ಕಡೂರಿನಲ್ಲಿ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತ ಮಕ್ಕಳಿಗೆ ಹಾಗೂ ಸಂಯೋಜಕ ಶಿಕ್ಷಕರಿಗೆ ಅಭಿನಂದನೆ ಕಾರ್ಯಕ್ರಮವನ್ನು ಗ್ರಾಪಂ ಸದಸ್ಯ ಶೇಷಪ್ಪ ಉದ್ಘಾಟಿಸಿದರು. ಸೀಗೆಹಡ್ಲು ಹರೀಶ್, ಮುಗುಳಿಕಟ್ಟೆ ಲೋಕೇಶ್, ವಿಜಯ್‌ಕುಮಾರ್, ರವಿಕಾಂತ್ ಇತರರಿದ್ದರು.
Published on

ಕಡೂರು: ಭವಿಷ್ಯದ ಜೀವನ ವೈಜ್ಞಾನಿಕ ಮತ್ತು ತಾಂತ್ರಿಕ ತಳಹದಿ ಮೇಲೆ ನಿಂತಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಲೋಕೇಶ್ವರಪ್ಪ ತಿಳಿಸಿದರು.

ಗುರುವಾರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆ ವಿಜೇತ ಮಕ್ಕಳಿಗೆ ಹಾಗೂ ಸಂಯೋಜಕ ಶಿಕ್ಷಕರಿಗೆ ಅಭಿನಂದನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತಾಂತ್ರಿಕತೆಯ ನಾಗಾಲೋಟದಲ್ಲಿ ತನ್ನತನ ಮತ್ತು ತನ್ನವರನ್ನೇ ಮರೆತು ಬದುಕುದ್ದಾನೆ. ಯುವಜನರು ವಿಜ್ಞಾನದ ಆಳ ಅರಿತು ಸಂಶೋಧನಾತ್ಮಕ ವಿಚಾರಗಳ ಎಡೆಗೆ ಸಾಗಬೇಕಾಗಿದೆ ಎಂದರು.

ಜನರು ಮೂಢನಂಬಿಕೆಗಳನ್ನು ಬದಿಗೊತ್ತಿ ವೈಚಾರಿಕತೆಯೆಡೆಗೆ ಸಾಗಬೇಕಿದೆ. ಕಾಲ್ಪನಿಕ ಜಗತ್ತಿನಲ್ಲಿ ಬದುಕಿನ ಹೋರಾಟ ನಡೆಸುತ್ತ ಸಮಯ ಕಳೆಯುವ ಬದಲು ಸರ್ವರೊಳಗೊಂದಾಗಿ ಸರ್ವರಿಗೂ ಒಳಿತನ್ನು ಬಯಸುವ ನಮ್ಮ ವೈಜ್ಞಾನಿಕ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಸಮಿತಿ ಜಿಲ್ಲಾ ಉಪಾಧ್ಯಕ್ಷ ಸೀಗೆಹಡ್ಲು ಹರೀಶ್ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಶಿಕ್ಷಣ ಮುಖ್ಯ ಎಂದರು. ಸಾಹಿತಿ ಲತಾ ರಾಜು ಮಾತನಾಡಿ, ಮಕ್ಕಳಲ್ಲಿ ಉಲ್ಲಾಸದಾಯಕ ಕಲಿಕೆಗೆ ಎಲ್ಲರೂ ಪ್ರೋತ್ಸಾಹ ಕೊಡಬೇಕು. ಮಕ್ಕಳ ಮನಸ್ಸು ಮುಗ್ದವಾಗಿರುವುದರಿಂದ ಭಾವನೆಗಳನ್ನು ಅರ್ಥಮಾಡಿಕೊಂಡು ಪಾಲಕರು ಮತ್ತು ಶಿಕ್ಷಕರು ಸಹಕರಿಸಬೇಕಿದೆ ಎಂದರು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಮುಗಳಿಕಟ್ಟೆ ಲೋಕೇಶ್ ಮಾತನಾಡಿ, ಪೂರ್ವಜರು ಸಂಪ್ರದಾಯವನ್ನು ವೈಜ್ಞಾನಿಕ ತಳಹದಿ ಮೇಲೆ ಜಾರಿಗೆ ತಂದಿದ್ದಾರೆ. ರಾಜ್ಯ ಮಟ್ಟದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರಥಮ ಸ್ಥಾನ ಗಳಿಸಿದ ಕೆಥಣಿ ಆಂಗ್ಲ ಮಾಧ್ಯಮ ಶಾಲೆ ಮೂಡಿಗೆರೆ ವಿದ್ಯಾರ್ಥಿ ಪ್ರಥಮ್‌ನನ್ನು ಅಭಿನಂದಿಸಲಾಗುತ್ತಿದೆ ಎಂದರು.

ಚುಟುಕು ಕವಿ ಬಿಳಿಗಿರಿ ವಿಜಯ್‌ಕುಮಾರ್ ಹಾಸ್ಯದ ಮೂಲಕ ಮಕ್ಕಳನ್ನು ರಂಜಿಸಿದರು. ಗ್ರಾಪಂ ಸದಸ್ಯ ಶೇಷಪ್ಪ, ಡಾ. ಸುಮಾ ಉಮೇಶ್, ಪ್ರಾಚಾರ್ಯ ರವಿಕಾಂತ್, ಎಂ.ಕೆ.ದಯಾನಂದ್, ನವೀನ್, ಹೊನ್ನೇಗೌಡ, ಕೆ.ಎನ್.ಮೋಹನ್, ಬಿ.ಎಲ್.ಮೋಹನ್, ಸಿ.ಪ್ರಸನ್ನ, ಮಂಜಪ್ಪ ದೊಡ್ಡಮನಿ, ಕಷ್ಣ್ಣಮೂರ್ತಿ, ಆರ್.ಪ್ರಕಾಶ್, ಎಸ್.ಶಾಂತಕುಮಾರ್, ಜೆ.ರುದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net