ವೈಜ್ಞಾನಿಕ ಚಿಂತನೆಗೆ ನಾಟಕಗಳು ಪೂರಕ

mysore
Published on

ಮೈಸೂರು: ನಾಟಕಗಳ ಮೂಲಕವೂ ವೈಜ್ಞಾನಿಕ ಚಿಂತನೆಯನ್ನು ಜನಸಾಮಾನ್ಯರಿಗೆ ತಲುಪಿಸಬೇಕಾಗಿದೆ ಎಂದು ರಂಗಕರ್ಮಿ ಪ್ರೊ.ಎಸ್.ಆರ್.ರಮೇಶ್ ಹೇಳಿದರು.

ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಭಾರತೀಯ ಸಂಗೀತ ಲೇಖನ ಮಾಲಿಕಾ ಭಾಗ-1, ರಂಗಭೂಮಿ-ವಾಧ್ಯಮ, ಇಂಗ್ಲಿಷ್ ಅವತರಣಿಕೆ ಥಿಯೇಟರ್ ಆ್ಯಂಡ್ ಮೀಡಿಯಾ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾಟಕ ಪ್ರಭಾವಶಾಲಿ ವಾಧ್ಯಮ. ಇದು ವೈಜ್ಞಾನಿಕ ಚಿಂತನೆಗಳನ್ನು ಜನರಿಗೆ ಮುಟ್ಟಿಸಲು ಬಳಕೆಯಾಗಬೇಕಿದೆ ಎಂದರು.

ಡಿಜಿಟಲ್ ಯುಗದಲ್ಲಿ ಯಾರೂ ಸಹ ದೂರದರ್ಶನ ನೋಡುತ್ತಿಲ್ಲ. ಎಲ್ಲದಕ್ಕೂ ಮೊಬೈಲನ್ನೇ ಆಶ್ರಯಿಸಲಾಗುತ್ತಿದೆ. ಮೊಬೈಲ್‌ನಲ್ಲೇ ಸಿನಿವಾ, ಧಾರವಾಹಿ ವೀಕ್ಷಿಸಲಾಗುತ್ತಿದೆ. ಇದರಿಂದ ಸಿನಿಮಾವನ್ನೂ ಮೊಬೈಲ್‌ಗೆ ಪೂರಕವಾಗುವ ರೀತಿಯಲ್ಲಿ ತೆಗೆಯಬೇಕಾದ ಸವಾಲು ಎದುರಾಗಿದೆ ಎಂದರು.

ಕೋವಿಡ್ ಕಾಲದಲ್ಲಿ ಸರ್ಕಾರಗಳು ವಲಸಿಗರ ಸಂಕಷ್ಟಗಳಿಗೆ ಸ್ಪಂದಿಸಲಿಲ್ಲ. ಬದಲಿಗೆ ‘ವಲಸಿಗರೇ ಇಲ್ಲ’ ಎಂದು ಸುಳ್ಳು ಹೇಳಿತು. ಸತ್ಯವನ್ನು ಪರಿಶೀಲಿಸಿ ವರದಿ ಮಾಡಬೇಕಾದ ಮಾಧ್ಯಮಗಳು ತಮ್ಮ ಜವಾಬ್ದಾರಿ ನಿರ್ವಹಿಸಲಿಲ್ಲ.

ಬದಲಿಗೆ ಸರ್ಕಾರದ ಹೇಳಿಕೆಯನ್ನೇ ಪ್ರಸಾರ ಮಾಡಿದವು. ಇಂತಹ ಸಂದರ್ಭದಲ್ಲಿ ನಾಟಕದ ಮೂಲಕ ಕರೊನಾ ಕಾಲದ ವಲಸಿಗರ ಸಮಸ್ಯೆಯನ್ನು ಜಗತ್ತಿಗೆ ತಿಳಿಸುವ ಕೆಲಸವಾಯಿತು. ಈ ಸಮಸ್ಯೆ ಕುರಿತು ಸಾಕ್ಷೃಚಿತ್ರಗಳು ಮೂಡಿಬಂದಿವೆ ಎಂದರು.

ಮೊಬೈಲ್, ಅಂತರ್ಜಾಲದಲ್ಲೇ ಮುಳುಗಿ ಹೋಗಿರುವ ವಿದ್ಯಾರ್ಥಿಗಳು ಕೆಲಸಕ್ಕೆ ಬಾರದ ವಿಚಾರದ ಕುರಿತು ವಾತನಾಡುತ್ತಾರೆ. ಅದರ ಕುರಿತು ತಲೆಕೆಡಿಸಿಕೊಳ್ಳುತ್ತಾರೆ. ಮೊಬೈಲ್‌ನಲ್ಲಿ ಬರುವ ಅಸಂಬಂಧ ವಿಷಯವನ್ನೇ ತಲೆಗೆ ತುಂಬಿಕೊಂಡಿದ್ದಾರೆ. ವಿದ್ಯಾರ್ಥಿಗಳು ಜೀವನಕ್ಕೆ ಉಪಯುಕ್ತವಾಗುವ ಪುಸ್ತಕವನ್ನು ಓದಬೇಕು. ಪ್ರಯೋಜನಕ್ಕೆ ಬಾರದ ವಿಚಾರಗಳಿಂದ ದೂರ ಇರಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯಗಳೂ ಸಹ ಸವಾಜಮುಖಿಯಾದ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಂತಹ ಕೃತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಂಗೀತ ವಿದ್ವಾಂಸರಾದ ಡಾ.ಸುಕನ್ಯಾ ಪ್ರಭಾಕರ್, ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಪರೀಕ್ಷಾಂಗ ಕುಲಸಚಿವ ಎಂ.ಜಿ. ಮಂಜುನಾಥ್, ಪತ್ರಕರ್ತ ಕೆ.ನರಸಿಂಹಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net