ವೈಜ್ಞಾನಿಕ ಕೃಷಿಯಿಂದ ಹೆಚ್ಚು ಲಾಭ

8MJR1
Published on

ಮಾಂಜರಿ: ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ. ಹಾಗಾಗಿ ಕೃಷಿ ತಜ್ಞರ ಸಲಹೆ ಪಡೆದು ಬೇಸಾಯ ಮಾಡಬೇಕು ಎಂದು ಬೆಂಗಳೂರಿನ ಧನುಕಾ ಅಗ್ರೋ ಟೆಕ್ನಿಕಲ್ ಲಿಮಿಟೆಡ್ ಕಂಪನಿ ಮುಖ್ಯಸ್ಥ ಉಮಾಕಾಂತ ತಾಂಬೋಳಿ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಶಿವಾಲಯದಲ್ಲಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ, ಚಿಕ್ಕೋಡಿ ಶಿವಶಕ್ತಿ ಶುಗರ್ ಲಿಮಿಟೆಡ್ ಸೌದತ್ತಿ ಹಾಗೂ ಧನುಕಾ ಅಗ್ರ‍್ರೋ ಟೆಕ್ನಿಕಲ್ ಬೆಂಗಳೂರು ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆ ನಿರ್ವಹಣೆ ಮತ್ತು ಕೀಟ ರೋಗ ಮತ್ತು ಕುಳೆ ನಿಯಂತ್ರಣ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತ ಸಾವಯವ ಕೃಷಿಗೆ ಆದ್ಯತೆ ನೀಡಿದೆ. ಆದರೆ, ಹಸಿರೀಕರಣ ಹೆಸರಿನಲ್ಲಿ, ರಾಸಾಯನಿಕ ಗೊಬ್ಬರ, ಬೀಜ ಬಳಕೆ, ಔಷಧ ಬಳಕೆಯಿಂದ ವಿಷಪೂರಿತ ಬೆಳೆ ಬೆಳೆಯುತ್ತಿವೆ ಎಂದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಖಡಗಾವಿ ಮಾತನಾಡಿ, ಪ್ರತಿಯೊಬ್ಬರೂ ಸಾವಯವ ಕೃಷಿ ಮಾಡುವ ಮೂಲಕ ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ಅತಿಥಿಯಾಗಿ ನಿರ್ದೇಶಕರಾದ ಭರತೇಶ ಬನವಣೆ, ಮಹಾವೀರ ಕಾತ್ರಾಳೆ, ಅಣ್ಣಾಸಾಹೇಬ ಇಂಗಳೆ, ಮಲ್ಲಪ್ಪ ಮೈಶಾಳೆ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಖಡಗಾವಿ, ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ವಿಜಯ ಪಾಟೀಲ ಇತರರಿದ್ದರು. ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎನ್.ಎಸ್.ಹಿರೇಮಠ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net