

ಜೇವರ್ಗಿ: ಎಸ್‌ಸಿ ಒಳಜಾತಿಗಳ ನಿರ್ದಿಷ್ಟ ಅಂಕಿ-ಅAಶ ಪಡೆಯುವಲ್ಲಿ ವಿಫಲರಾದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಸಲ್ಲಿಸಿದ ವರದಿ ತಡೆಹಿಡಿದು ಉಪಸಮಿತಿ ನೇಮಿಸಿ ಸ್ಪಷ್ಟ ಮತ್ತು ನ್ಯಾಯಸಮ್ಮತ ವೈಜ್ಞಾನಿಕ ವರದಿ ಸಿದ್ಧಪಡಿಸಿ ಸಮಸ್ತ ಪರಿಶಿಷ್ಟ ಜಾತಿ (ಬಲಗೈ) ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಆ.೧೬ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಚರ್ಚಿಸಿ ಅನ್ಯಾಯ ಸರಿಪಡಿಸಿದರೆ ಮಾತ್ರ ವರದಿ ಜಾರಿಗೊಳಿಸಬೇಕು. ಸಾಮಾಜಿಕವಾಗಿ ಹಿಂದುಳಿದ ಹೊಲೆಯ ಮತ್ತು ಮಾದಿಗರಿಗೆ ಅನುಕೂಲವಾಗುವಂತೆ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರಮುಖರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ, ಭೀಮರಾಯ ನಗನೂರ, ಹಯ್ಯಾಳಪ್ಪ ಗಂಗಾಕರ್, ಮಲ್ಲಣ್ಣ ಕೊಡಚಿ, ಮಹಾದೇವ ಕೋಳಕೂರ, ದೌಲಪ್ಪ ಮದನ, ಶ್ರೀಹರಿ ಕರಕಳ್ಳಿ, ರವಿ ಕುರಳಗೇರಿ, ಸಿದ್ದು ಕೆರೂರ, ಮಾಪಣ್ಣ ಕಟ್ಟಿ, ವಿಶ್ವರಾಧ್ಯ ಗಂವ್ಹಾರ, ಮಹೇಶ ಕೋಕಿಲೆ, ರಾಯಪ್ಪ ಬಾರಿಗಿಡ, ಶಾಂತಪ್ಪ ಯಲಗೋಡ, ಭಾಗಣ್ಣ ಸಿದ್ನಾಳ, ಭೀಮರಾಯ ಬಳಬಟ್ಟಿ, ಸಿದ್ದಪ್ಪ ಆಲೂರ, ಭಾಗಣ್ಣ ಕೋಳಕೂರ, ಬಾಬು ಹಿಪ್ಪರಗಿ, ಧರ್ಮಣ್ಣ ಮಾವನೂರ, ದೇವಿಂದ್ರ ಮುದವಾಳ, ಪರಮಾನಂದ ಯಲಗೋಡ, ಮರೆಪ್ಪ ಜನಿವಾರ, ಶ್ರೀಮಂತ ಕಿಲೇದಾರ, ಶಿವಶರಣ ಮಂದೇವಾಲ, ಕಿರಣ ದೊಡಮನಿ, ಸಿದ್ದು ಜನಿವಾರ, ರವಿ ಬಿರನಳ್ಳಿ, ಶರಣಬಸಪ್ಪ ಲಖಣಾಪುರ, ಶಿವಶರಣ ಮಾರಡಗಿ, ಯಶ್ವಂತ ಬಡಿಗೇರ ಇತರರು ಪಾಲ್ಗೊಂಡಿದ್ದರು.