ವೈಜ್ಞಾನಿಕ ಅನ್ವೇಷಣೆ ವಿಕಸಿತ ಭಾರತದ ಕೊಡುಗೆ

mysore
Published on

ಮೈಸೂರು: ವಿಜ್ಞಾನ ಎಂಬುದು ವಿಶ್ವಾದ್ಯಂತ ವಿಭಿನ್ನ ಜ್ಞಾನ ಶಾಖೆಗಳಾಗಿ ವಿಸ್ತೃತವಾಗಿ ಬೆಳೆದಿದೆ ಎಂದು ಚಾಮರಾಜನಗರ ಗ್ರಾವಿಟಿ ಸೈನ್ಸ್ ಫೌಂಡೇಷನ್ ಸ್ಥಾಪಕ ಎ.ಎಸ್.ಅಭಿಷೇಕ್ ಹೇಳಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಭೌತ, ರಸಾಯನಿಕ ಮತ್ತು ಗಣಿತ ವಿಜ್ಞಾನಗಳ ಮಹತ್ವ ಕುರಿತು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ವಿವಿಧ ಶೋಧಗಳ ಫಲಶ್ರುತಿಯಿಂದ ವೈಜ್ಞಾನಿಕತೆ ಬೆಳದಿದೆ. ವಿವಿಧ ವಿಭಾಗಗಳಲ್ಲಿ ವೈಜ್ಞಾನಿಕ ಶೋಧನೆ ಹೆಚ್ಚಿನ ಮಟ್ಟದಲ್ಲಿ ಸಾಗುತ್ತಿರುವುದರಿಂದ ವೈಜ್ಞಾನಿಕ ಅನ್ವೇಷಣೆ ಎಂಬುದು ವಿಕಸಿತ ಭಾರತದ ಕೊಡುಗೆಯಾಗಿದೆ ಎಂದರು.

ಪ್ರಾಂಶುಪಾಲ ಡಾ.ರೇಚಣ್ಣ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನಕ್ಕೆ ಸಂಬಂಧಿಸಿದಂತೆ ಕುತೂಹಲ ಮತ್ತು ತರ್ಕದೊಂದಿಗೆ ಸಾಗುತ್ತಲೆ ಹೊಸದಾದ ಶೋಧನಾ ಕಾರ್ಯದ ಕಡೆಗೆ ಕಾರ್ಯನ್ಮುಖರಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.

ಸಂಯೋಜಕ ಎಂ.ಗಿರೀಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಎಂ.ಎಂ.ಸ್ವಾಮಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಡಿ ಎಂ.ಲೋಕೇಶ್ವರಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಬಿ.ಸೌಮ್ಯಾ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಲ್.ಪ್ರತಿಭಾ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net