ವೈಚಾರಿಕ ಪ್ರತಿಪಾದಕ ಕುವೆಂಪು

Published on

ಕಲಬುರಗಿ: ರಾಷ್ಟçಕವಿ ಕುವೆಂಪು ವೈಚಾರಿಕ ಪ್ರತಿಪಾದಕರಾಗಿದ್ದು, ಅವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ, ವಿಶ್ವ ಮಾನವ ಪರಿಕಲ್ಪನೆ ಹಾಗೂ ಬಸವಾದಿ ಶರಣರ ಸಂದೇಶಗಳನ್ನು ಕಾಣಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು. ನಗರದ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟçಕವಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ಮಾತನಾಡಿ, ಕೃತಿಗಳಲ್ಲಿ ವಾಸ್ತವದ ನೆಲೆಗಟ್ಟಿನಲ್ಲಿ ಸಾಮಾಜಿಕ ತಲ್ಲಣಗಳ ಚಿತ್ರಣ ಕಟ್ಟಿಕೊಟ್ಟಿದ್ದಾರೆ ಎಂದರು. ಲೋಕೋಪಯೋಗಿ ಇಲಾಖೆ ರಾಷ್ಟಿçÃಯ ಹೆz್ದÁರಿ ವಿಭಾಗದ ಸಹಾಯಕ ಅಧೀP್ಷÀಕ ಅಭಿಯಂತರ ಮಹ್ಮದ್ ಇಬ್ರಾಹಿಂ, ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಮಾತನಾಡಿದರು. ಪ್ರಮುಖರಾದ ಶಿವರಾಜ ಅಂಡಗಿ, ಸಂತೋಷ ಕುಡಳ್ಳಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರ ಬಂಟನಹಳ್ಳಿ, ಪ್ರಭುಲಿಂಗ ಮೂಲಗೆ, ರವಿಕುಮಾರ ಶಹಾಪುರಕರ, ಭಾನುಕಾಂತ ರೆಡ್ಡಿ, ಸಂತೋಷ ಮೂಳಜೆ, ಮಂಜುನಾಥ ಕಂಬಾಳಿಮಠ, ಶಕುಂತಲಾ ಪಾಟೀಲ್ ಜವಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net