ವೈಕುಂಠ ಏಕಾದಶಿ ವಿಶೇಷ ದರ್ಶನ

02Kush02
ಕುಶಾಲನಗರ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾದ ವೈಕುಂಠ ದ್ವಾರ ನಿರ್ಮಾಣ ಮಾಡಲಾಗಿತ್ತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್, ಬಿ.ಆಟ್. ನಟರಾಜ್ ಮತ್ತು ಎಸ್.ಎಂ ಸತೀಶ್ ಇತರರು ದರ್ಶನ ಪಡೆದರು.
Published on

ಕುಶಾಲನಗರ: ಧನುರ್ಮಾಸದ ವೈಕುಂಠ ಏಕಾದಶಿ ನಿಮಿತ್ತ ಸೋಮವಾರ ಇಲ್ಲಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರೀ ವಿಷ್ಣು ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಈ ಸಂದರ್ಭ ವೈಕುಂಠ ದ್ವಾರ ನಿರ್ಮಿಸಿ ಭಕ್ತರಿಗೆ ವಿಶೇಷ ಪ್ರವೇಶ ಕಲ್ಪಿಸಲಾಗಿತ್ತು. ಆರ್ಯವೈಶ್ಯ ಮಂಡಳಿ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಅರ್ಚಕರಾದ ಯೋಗೀಶ ಭಟ್ ಮತ್ತು ಗಿರೀಶ ಭಟ್ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಮಹಾಪೂಜೆ ಮತ್ತು ಮಹಾಮಂಗಳಾರತಿ ನಡೆಸಲಾಯಿತು.

ಸಪ್ತ ದ್ವಾರಗಳನ್ನು ದಾಟಿ ಬಂದು ಮಹಾವಿಷ್ಣುವಿನ ದರ್ಶನ ಪಡೆದರೆ ಇಷ್ಟಾರ್ಥಗಳು ನೆರವೇರುತ್ತವೆ. ಮನಸ್ಸಿನಲ್ಲಿ ಬೇಡಿಕೊಂಡಿದ್ದನ್ನು ದೇವರು ಇಂದು ಕರುಣಿಸುತ್ತಾನೆ ಎನ್ನುವ ಪ್ರತೀತಿಯಿಂದ ಭಕ್ತಾದಿಗಳು ದರ್ಶನ ಪಡೆದು ಧನ್ಯತೆ ಮೆರೆದರು. ಭಕ್ತರಿಗೆ ಅನ್ನ ಪ್ರಸಾದದೊಂದಿಗೆ ಲಡ್ಡು ವಿತರಣೆ ಮಾಡಲಾಯಿತು. ಆರ್ಯವೈಶ್ಯ ಮಹಿಳಾ ಮಂಡಳಿಯ ಸದಸ್ಯರು ಭಜನೆ ನಡೆಸಿಕೊಟ್ಟರು.

ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಉದಯಕುಮಾರ್, ಉಪಾಧ್ಯಕ್ಷ ಎಸ್.ಎಂ. ಸತೀಶ್, ಬಿ.ಆರ್. ನಟರಾಜ್, ಎಂ.ಪಿ.ಸತ್ಯನಾರಾಯಣ, ಲಕ್ಷ್ಮಿ ಶ್ರೀನಿವಾಸ್, ಪ್ರತಿಮಾ ರಾಘವೇಂದ್ರ, ಉಮಾ ಕೃಷ್ಣರಾಜ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net